ಹೊಸದಿಲ್ಲಿ: ಸರ್ಕಾರಿ ಒಡೆತನದ ಮಹಾರತ್ನ ಕಂಪನಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್ (Oil and Natural Gas Corporation Limited) (ಒಎನ್ ಜಿಸಿ) ಗೆ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಸ್ಥಾನಕ್ಕೆ ಅಲ್ಕಾ ಮಿತ್ತಲ್ ಅವರನ್ನು ನೇಮಕ ಮಾಡಲಾಗಿದೆ.
ಆ ಮೂಲಕ 65 ವರ್ಷಗಳ ಇತಿಹಾಸದ ಕಂಪನಿ ಹಾಗೂ ದೇಶದ ಮಹಾರತ್ನ ಕಂಪನಿಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂಡಿ ಸ್ಥಾನಕ್ಕೆ ಮಹಿಳೆಯೊಬ್ಬರು ನೇಮಕವಾದಂತಾಗಿದೆ.
ಒಎನ್ ಜಿಸಿಯ ಮಾನವ ಸಂಪನ್ಮೂಲ (HR) ವಿಭಾಗದಲ್ಲಿ ನಿರ್ದೇಶಕಿಯಾಗದ್ದ (Director) ಅಲ್ಕಾ ಮಿತ್ತಲ್ ಅವರಿಗೆ ಹೆಚ್ಚುವರಿಯಾಗಿ ಸಿಎಂಡಿ ಜವಾಬ್ದಾರಿಯನ್ನು ನೀಡಲಾಗಿದೆ. ಒಎನ್ ಜಿಸಿ ಯ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಕುಮಾರ್ 2021ರ ಡಿಸೆಂಬರ್ 31ರಂದು ನಿವೃತ್ತರಾಗಿ ತೆರವಾಗಿದ್ದ ಸ್ಥಾನಕ್ಕೆ ನಾಲ್ಕು ದಿನಗಳ ಬಳಿಕ ಅಲ್ಕಾ ಮಿತ್ತಲ್ ನೇಮಕರಾಗಿದ್ದಾರೆ.
ಅಲ್ಕಾ ಮಿತ್ತಲ್ ಯಾರು?
ಡಾ. ಅಲ್ಕಾ ಮಿತ್ತಲ್ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆMBA (HRM) ಪದವಿ ಮತ್ತು ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಕಂಪನಿಯ ವೆಬ್ ಸೈಟ್ ಪ್ರಕಾರ, ಮಿತ್ತಲ್ 1985 ರಲ್ಲಿ ಒಎನ್ ಜಿಸಿಗೆ ಪದವೀಧರ ತರಬೇತಿದಾರರಾಗಿ ಸೇರಿದರು. ಮಿತ್ತಲ್ ಅವರು 2018ರ ನವೆಂಬರ್ನಿಂದ ONGCಯಲ್ಲಿ ನಿರ್ದೇಶಕರಾಗಿದ್ದಾರೆ (HR) ಮತ್ತು ONGC ಯ ಇತಿಹಾಸದಲ್ಲಿ ಪೂರ್ಣ ಅವಧಿಯ ನಿರ್ದೇಶಕರ ಸ್ಥಾನ ಹೊಂದಿರುವ ಮೊದಲ ಮಹಿಳೆ ಎನಿಸಿದ್ದಾರೆ.
PublicNext
04/01/2022 05:37 pm