ನವದೆಹಲಿ: ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇವೆ. ಮಂಗಳವಾರ ಮತ್ತೊಂದು ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ದರ 25 ಪೈಸೆ ಏರಿದ್ದು, ದಿಲ್ಲಿಯಲ್ಲಿ ಇದೇ ಮೊದಲ ಬಾರಿಗೆ ಬೆಲೆ 85 ರು. ದಾಟಿದೆ. ಇನ್ನು ಬೆಂಗಳೂರಿನಲ್ಲೂ ದಾಖಲೆಯ 88.07 ರು.ಗೆ ಪೆಟ್ರೋಲ್ ದರ ಏರಿದೆ.
ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್‌ಗೆ 85 ರು. ದಾಖಲಾಗಿದ್ದರೆ, ಮುಂಬೈನಲ್ಲಿ 91.8 ರು.ಗೆ ಏರಿತು. ಸೋಮವಾರವಷ್ಟೇ 25 ಪೈಸೆ ಹೆಚ್ಚಿಸಲಾಗಿತ್ತು. ಮಂಗಳವಾರದ ದರ ಏರಿಕೆಯೊಂದಿಗೆ 2 ದಿನದಲ್ಲಿ 50 ಪೈಸೆ ಏರಿದಂತಾಗಿದೆ.
ಇನ್ನು ಡೀಸೆಲ್ ದರ 27 ಪೈಸೆ ಏರಿದ್ದು, ದಿಲ್ಲಿಯಲ್ಲಿ 75.38 ರು.ಗೆ ಹೆಚ್ಚಿದೆ. ಮುಂಬೈನಲ್ಲಿ ದಾಖಲೆಯ 82.13 ರು.ಗೆ ಏರಿದೆ. ಬೆಂಗಳೂರಿನಲ್ಲಿ ಡೀಸೆಲ್ 80 ರು. ಸನಿಹಕ್ಕೆ ಧಾವಿಸಿದ್ದು, ಮಂಗಳವಾರ 27 ಪೈಸೆ ಏರಿ 79.94 ರು.ಗೆ ನೆಗೆದಿದೆ.
ಒಟ್ಟಾರೆ ಜನವರಿ 6ರ ಬಳಿಕ ಪೆಟ್ರೋಲ್ 1.49 ರು. ಹಾಗೂ ಡೀಸೆಲ್ 1.51 ರು. ಏರಿಕೆಯಾಗಿದೆ.
PublicNext
20/01/2021 02:08 pm