ನವದೆಹಲಿ: ದೇಶದ ಪ್ರತಿಷ್ಠಿತ ಟಾಟಾ ಕಂಪನಿಯು 90 ಸಾವಿರ ಕೋಟಿ ರೂ. ನಷ್ಟದ ಸುಳಿಯಲ್ಲಿ ಸಿಲುಕಿರುವ ʼಮಹಾರಾಜʼನನ್ನು ಖರೀದಿಸಲು ಆಸಕ್ತಿ ತೋರಿಸಿದೆ.
2018ರಲ್ಲಿ ಕೇಂದ್ರ ಸರ್ಕಾರ ಬಿಡ್ ಆಹ್ವಾನಿಸಿತ್ತು. ಆದರೆ ಯಾರೂ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ಏರ್ ಇಂಡಿಯಾ ಮಾರಾಟ ಮಾಡುವ ಮೊದಲ ಪ್ರಯತ್ನದಲ್ಲಿ ವಿಫಲವಾಗಿತ್ತು. ಈ ಸಂದರ್ಭದಲ್ಲಿ ಶೇ.76 ರಷ್ಟು ಪಾಲು ಮಾರಾಟ ಮಾಡುವುದರ ಜೊತೆಗೆ ಸಾಲವನ್ನು ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿತ್ತು.
ಈ ಬಾರಿ ಬಿಡ್‌ನಲ್ಲಿ ಶೇ.100 ರಷ್ಟು ಷೇರನ್ನು ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಹೀಗಾಗಿ ಟಾಟಾ ಕಂಪನಿ, ಏರ್ ಇಂಡಿಯಾ ನೌಕರರ ಒಕ್ಕೂಟ ಮತ್ತು ಅಮೆರಿಕದ ಇಂಟರ್ಅಪ್ಸ್ ಕಂಪನಿ ಖರೀದಿಸಲು ಆಸಕ್ತಿ ತೋರಿಸಿದೆ. ಕೇಂದ್ರ ಸರ್ಕಾರ ಜನವರಿ 5ರಂದು ಬಿಡ್ಡಿಂಗ್‌ಗೆ ಅರ್ಹತೆ ಪಡೆದವರ ಹೆಸರನ್ನು ಪ್ರಕಟಿಸುವ ಸಾಧ್ಯತೆಯಿದೆ.
ಟಾಟಾ ಗ್ರೂಪ್, ಮಲೇಷ್ಯಾದ ಏರ್ ಏಷ್ಯಾ ಗ್ರೂಪ್ ಜೊತೆ ಸೇರಿ ಜಂಟಿಯಾಗಿ ಬಿಡ್‌ನಲ್ಲಿ ಭಾಗವಹಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಯಾಗಿದೆ. ವಿಶೇಷ ಏನೆಂದರೆ ಟಾಟಾ ಕಂಪನಿಯೇ 88 ವರ್ಷದ ಹಿಂದೆ ಅಂದರೆ 1932ರಲ್ಲಿ ಟಾಟಾ ಏರ್‌ಲೈನ್ಸ್ ಹೆಸರಿನಲ್ಲಿ ಏರ್ ಇಂಡಿಯಾ ಕಂಪನಿಯನ್ನು ಆರಂಭಿಸಿತ್ತು. ಬಳಿಕ ಅದು 1946ರಲ್ಲಿ ಏರ್ ಇಂಡಿಯಾ ಕಂಪನಿಯಾಗಿ ಬದಲಾಗಿತ್ತು.
PublicNext
14/12/2020 10:24 pm