ತುಮಕೂರು: ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಬಳಿಯಲ್ಲಿ ಖಾಸಗಿ ಬಸ್ ಅಪಘಾತಗೊಂಡು ಎಂಟು ಜನ ಮೃತಪಟ್ಟು ಸುಮಾರು 25ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದರು. ನಂತರ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ದುರಂತದ ಬಳಿಕ 7 ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು, ಈ ಮಾರ್ಗದಲ್ಲಿ ಆರಂಭಿಸಿದೆ.
ಪಳವಳ್ಳಿ ಕಟ್ಟೆ ಬಳಿಯಲ್ಲಿನ ಖಾಸಗಿ ಬಸ್ ಅಪಘಾತದ ಬಳಿಕ, 24 ಗಂಟೆಯೊಳಗೆ ಕೆಎಸ್‌ಆರ್‌ಟಿಸಿ ಚುರುಕುಗೊಂಡಿದ್ದು, ವೈ ಎನ್ ಹೊಸಕೋಟೆಯಿಂದ ಪಾವಗಡ ಮಾರ್ಗಕ್ಕೆ ಭಾನುವಾರದಿಂದ 7 ಬಸ್‌ಗಳನ್ನು ಸಂಚಾರಕ್ಕಾಗಿ ನಿಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಬಸ್ ಅಪಘಾತಕ್ಕೂ ಮುನ್ನಾದ ದೃಶ್ಯಾವಳಿ ಬುಡರೆಡ್ಡಿ ಹಳ್ಳಿ ಬಳಿಯಲ್ಲಿನ ಟೋಲ್ ಬಳಿಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆ ದೃಶ್ಯದಲ್ಲಿ ಎದೆ ನಡುಗಿಸುವಂತಿವೆ. ಸಂತೆಗೆ ಕುರಿಗಳನ್ನು ತುಂಬಿಕೊಂಡು ಹೋಗುವಂತೆ, ಯಮದೂತ ಬಸ್, ಜನರನ್ನು ತುಂಬಿಸಿಕೊಂಡಿರುವುದು ದೃಶ್ಯಾವಳಿಯಲ್ಲಿ ಕಂಡು ಬಂದಿದೆ.
PublicNext
21/03/2022 07:37 am