ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಮುನಾ ನದಿಯಲ್ಲಿ ವಿಪರೀತ ನೊರೆ: ಕಾಣುತ್ತಿಲ್ಲ ತೆರೆ

ನವದೆಹಲಿ- ದೇಶದ ಪ್ರಮುಖ ನದಿ ಯಮುನಾ ಒಡಲು ಮತ್ತಷ್ಟು ವಿಷಪೂರಿತವಾಗುತ್ತಲೇ ಇದೆ. ಬೆಂಗಳೂರಿನ ಬೆಳ್ಳಂದೂರು ಕೆರೆ ಮೇಲೆ ನೊರೆ ಕಾಣಿಸಿತ್ತು. ಆ ನೊರೆಯ ನಡುವೆ ಬೆಂಕಿಯ ಸಣ್ಣ ಕೆನ್ನಾಲಗೆ ಕೂಡ ಕಾಣಿಸಿಕೊಂಡಿದ್ದವು. ಇದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.

ಈಗ ಯಮುನಾ ನದಿ ಕೂಡ ಇದೇ ವಿಷಯಕ್ಕೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಯಮುನಾ ನದಿಯ ಒಡಲಾಳದಲ್ಲಿ ನೊರೆಯ ಪ್ರಮಾಣ ಹೆಚ್ಚಳವಾಗಿದೆ.

ಕಳೆದ ವರ್ಷ ಕೂಡ ಇದೇ ತೆರನಾಗಿ ನೊರೆ ಎದ್ದಿತ್ತು.‌ ದೆಹಲಿಯ ಸುಮಾರು 18 ರಾಜಕಾಲುವೆಗಳ ನೀರು ಯಮುನೆಯ ತಳ ಸೇರುತ್ತಿದೆ. ಇದರಲ್ಲಿ ಸಾಬೂನು ಮತ್ತು ಮಾರ್ಜಕಗಳ ನೀರು ಕೂಡ ಸೇರಿದೆ. ಹೀಗಾಗಿ ನದಿ ಮೈಮೇಲೆ ವಿಪರೀತ ನೊರೆ ಕಾಣುತ್ತಿದೆ.

ಗಂಗೆಯ ತಂಗಿ ಎನಿಸಿಕೊಂಡ ಯಮುನಾ ನದಿಯನ್ನು ಉಳಿಸಲು ಪರಿಸರವಾದಿಗಳು ಧ್ವನಿ ಎತ್ತುತ್ತಲೇ ಇದ್ದಾರೆ.

Edited By : Nagaraj Tulugeri
PublicNext

PublicNext

04/11/2020 01:13 pm

Cinque Terre

59.34 K

Cinque Terre

5

ಸಂಬಂಧಿತ ಸುದ್ದಿ