ಕಾಸರಗೋಡು: ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರದ ದೇವರ ಮೊಸಳೆ ಎಂದೇ ಪ್ರಸಿದ್ಧ ಪಡೆದಿದ್ದ ಬಬಿಯಾ ತನ್ನ ದೀರ್ಘ ಬದುಕಿಗೆ ವಿದಾಯ ಹೇಳಿದೆ.
ಅನೇಕ ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುತ್ತಿದ್ದ ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಕೆಲ ವರ್ಷದ ಹಿಂದೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು. ದೇವರ ನೈವೇದ್ಯವೇ ಬಬಿಯಾಗೆ ನಿತ್ಯ ಆಹಾರ. ಈ ಕೆರೆಗೆ ಭಕ್ತರೂ ಇಳಿಯುತ್ತಿದ್ದರು. ಆದರೆ ಇದುವರೆಗೂ ಯಾರಿಗೂ ನೋವನ್ನುಂಟು ಮಾಡಿದ ಘಟನೆಗಳೇ ಇಲ್ಲ ಎಂಬುದು ಉಲ್ಲೇಖ, ಇದೀಗ ಬಬಿಯಾ ಸಾವಿನಿಂದ ಭಕ್ತರು ದುಃಖಿತಗೊಂಡಿದ್ದಾರೆ.
PublicNext
10/10/2022 01:37 pm