ನವ ದೆಹಲಿ: ಮನೆಯವರಿಗೂ ಹೇಳದೆ 13 ವರ್ಷದ ಬಾಲಕನೊಬ್ಬ ಸುಮಾರು 250 ಕಿ.ಮೀ.ಸೈಕಲ್ ನಲ್ಲಿ ಕ್ರಮಿಸಿ ನೆಚ್ಚಿನ ಯೂಟ್ಯೂಬರ್ ನನ್ನು ಭೇಟಿ ಮಾಡಲು ಹೋದ ಘಟನೆ ಪಂಜಾಬ್ ನಲ್ಲಿ ನಡೆದಿದೆ.ಹೌದು ಪಂಜಾಬ್ನ ಪಟಿಯಾಲದ 13 ವರ್ಷದ ಬಾಲಕ ಮೂರು ದಿನಗಳ ಕಾಲ ಸೈಕಲ್ ತುಳಿಯುತ್ತಾ ದೆಹಲಿ ತಲುಪಿದ್ದಾನೆ. ಮಗ ಮನೆಯಲ್ಲಿ ಕಾಣುತ್ತಿಲ್ಲವೆಂದು ಪೋಷಕರು ಹುಡುಕಾಡಿದ್ದಾರೆ. ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪಂಜಾಬ್ನಿಂದ ದೆಹಲಿಗೆ ಬಂದ ಬಾಲಕ ಯೂಟ್ಯೂಬರ್ ನಿಶ್ಚಯ್ ಮಲ್ಹಾನ್ ನನ್ನು ಭೇಟಿ ಮಾಡಲು ಆತನ ಅಪಾರ್ಟ್ ಮೆಂಟ್ ತೆರಳಿದ್ದಾನೆ. ಆದರೆ ನಿಶ್ಚಯ್ ಮಲ್ಹಾನ್ ಅಲ್ಲಿರಲಿಲ್ಲ. ಆತ ದುಬೈಗೆ ತೆರಳಿದ್ದ.ಪೊಲೀಸರು ಸಾಮಾಜಿಕ ಜಾಲತಾಣ ಹಾಗೂ ಸಿಸಿಟಿವಿ ದೃಶ್ಯಗಳ ಸಹಾಯದಿಂದ ಬಾಲಕನನ್ನು ರಕ್ಷಿಸಿದ್ದಾರೆ. ವಿಷಯ ತಿಳಿದ ಯೂಟ್ಯೂಬರ್ ಬಾಲಕನ ಮಾಹಿತಿ ಶೇರ್ ಮಾಡಿ ಜನರಲ್ಲಿ ರಕ್ಷಿಸಲು ಮನವಿ ಸಲ್ಲಿಸಿದ್ದರು.
ಸದ್ಯ ಪೊಲೀಸರು ಬಾಲಕನ್ನು ಪತ್ತೆ ಹಚ್ಚಿ ಮಾಹಿತಿ ನೀಡಿದ ಬಳಿಕ ಪೋಷಕರು ಬಂದು ಬಾಲಕನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
PublicNext
08/10/2022 06:07 pm