ಹಸಿವು ಯಾರನ್ನೂ ಬಿಟ್ಟಿಲ್ಲ. ಇದೇ ಕಾರಣಕ್ಕೆ ಅನೇಕರು ಪ್ರಾಣ ತೆತ್ತಿದ್ದಾರೆ. ಸಾಕಷ್ಟು ಸಾವು ನೋವುಗಳಾಗಿದ್ದನ್ನು ನಾವು ಕಂಡಿದ್ದೇವೆ.
ಕೆಲವರು ಹಸಿವನ್ನು ನೀಗಿಸಿಕೊಳ್ಳಲು ವಿಕಲಚೇತನರಂತೆ ನಟಿಸಿದ ಅದೆಷ್ಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಹೀಗೆ ಶ್ವಾನವೊಂದು ತುತ್ತು ಅನ್ನಕ್ಕಾಗಿ ಹೆಳವನಂತೆ ನಟಿಸಿದ ವಿಡಿಯೋವೊಂದು ವೈರಲ್ ಆಗಿದೆ
ಸದ್ಯ ಶ್ವಾನ ಮಾಡಿದ ನಾಟಕ ನಿಜಕ್ಕೂ ಅಚ್ಚರಿ ಮೂಡಿಸಿದೆ.
ಹೌದು ವೈರಲ್ ಆದ ವಿಡಿಯೋವೊಂದರಲ್ಲಿ ಶ್ವಾನವೊಂದು ಬ್ರೆಡ್ ಗಾಗಿ ಕುಂಟುತ್ತಾ ರಸ್ತೆ ದಾಟಿದೆ. ಬಳಿಕ ಬ್ರೆಡ್ ಸಿಗುತ್ತಿದ್ದಂತೆಯೇ ಸಲಿಸಾಗಿ ನಡೆದು ಸಾಗುವುದನ್ನು ಕಾಣಬಹುದು.
ಈ ವಿಡಿಯೋ ಕಂಡ ನೆಟ್ಟಿಗರು ನಸುನಕ್ಕಿದ್ದಾರೆ. ಹಸಿವೆಯಿಂದ ಶ್ವಾನ ಮಾಡಿದ ನಾಟಕ ಕಂಡು ಮಿಶ್ರ ಕಮೆಂಟ್ ಮಾಡುತ್ತಿದ್ದಾರೆ.
PublicNext
25/09/2022 10:03 pm