ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಮದ ಅಭಿವೃದ್ಧಿ ಕನಸು ಕಂಡಿದ್ದ ಯುವಕ; ತನ್ನ ಮದುವೆ ದುಡ್ಡಲ್ಲಿ ರಸ್ತೆ ನಿರ್ಮಿಸಿದ ಸಾಧಕ

ತಮಿಳುನಾಡು: ತಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಒಳ್ಳೆಯ ರಸ್ತೆ ಇರಬೇಕು ಎಂಬ ಕನಸು ಕಂಡಿದ್ದ ವ್ಯಕ್ತಿಯೊಬ್ಬ ತನ್ನ ಕನಸನ್ನು ಸಾಧಿಸಿ ತೋರಿಸಿದ ಘಟನೆಯೊಂದು ಭಾರೀ ವೈರಲ್ ಆಗುತ್ತಿದೆ.

ವಿಲ್ಲುಪುರಂ ಜಿಲ್ಲೆಯ ವನೂರ್ ಗ್ರಾಮದಿಂದ 18 ಕಿ.ಮೀ ದೂರದ ಊರೊಂದರಲ್ಲಿ ಟೆಕ್ಕಿಯಾಗಿರುವ ಚಂದ್ರ ಶೇಖರನ್ ವಾಸವಾಗಿದ್ದರು. ಈ ಊರಲ್ಲಿ ಸುಮಾರು 350 ಕುಟುಂಬಗಳಿದ್ದವು. ಚಂದ್ರಶೇಖರನ್ ಅವರ ಸಂಬಂಧಿಕರು ಸೇರಿದಂತೆ ಸುಮಾರು 50 ಕುಟುಂಬಗಳು ಈಶ್ವರನ್ ಕೋಯಿಲ್ ಸ್ಟ್ರೀಟ್ನಲ್ಲಿ ವಾಸಿಸುತ್ತಿದ್ದವು.

31ರ ಹರೆಯದ ಪಿ ಚಂದ್ರಶೇಖರನ್ ಅವರು ತಮ್ಮ ಚಿಕ್ಕ ಹಳ್ಳಿಯಲ್ಲಿ ಉತ್ತಮ ರಸ್ತೆಗಳನ್ನು ನೋಡಬೇಕೆಂದು ಕನಸು ಕಂಡಿದ್ದರು. ಆದರೆ ಗ್ರಾಮದಲ್ಲಿ 25 ವರ್ಷಗಳ ಕಾಲ ವ್ಯರ್ಥವಾಗಿ ಕಾಯುತ್ತಿದ್ದ ಚೆನ್ನೈನ ಟೆಕ್ಕಿ 280 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆಯನ್ನು ತನ್ನ ಮದುವೆಗೆಂದು ಉಳಿಸಿದ್ದ 10.5 ಲಕ್ಷ ರೂ. ನಲ್ಲಿ ನಿರ್ಮಿಸಿ ತೋರಿಸಿದ್ದಾರೆ

ಈ ಸಂದರ್ಭದಲ್ಲಿ ಪಿ.ಚಂದ್ರಶೇಖರನ್ ಮಾತನಾಡಿ, ಕಳೆದ ಬಾರಿ ನನ್ನ ಗ್ರಾಮದಲ್ಲಿ ರಸ್ತೆ ನಿರ್ಮಾಣವಾದಾಗ ನಾನು ಪ್ರಾಥಮಿಕ ತರಗತಿ ವಿದ್ಯಾರ್ಥಿಯಾಗಿದ್ದೆ. ನಾನೀಗ ಓದು ಮುಗಿಸಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಹಳೇ ರಸ್ತೆಗಳು ಇನ್ನೂ ಸುಧಾರಣೆ ಕಾಣದೆ ಹಾಗೇ ಇದ್ದವು ಎಂದು ತಿಳಿಸಿದ್ದಾರೆ. ಈ ಮೂಲಕ ಮದುವೆಗೆಂದು ಕೂಡಿಟ್ಟ ಹಣದಲ್ಲಿ ಊರಿಗೆ ರಸ್ತೆ ನಿರ್ಮಿಸಿ ಈ ವ್ಯಕ್ತಿ ಗ್ರಾಮಸ್ಥರ ಶ್ಲಾಘನೆ ಗಿಟ್ಟಿಸಿದ್ದಾರೆ.

Edited By : Abhishek Kamoji
PublicNext

PublicNext

24/08/2022 06:55 pm

Cinque Terre

27.16 K

Cinque Terre

3

ಸಂಬಂಧಿತ ಸುದ್ದಿ