ಗದಗ: ಇವತ್ತಿನ ಕಾಲದಲ್ಲಿ ವಯಸ್ಸಾದ ತಂದೆ ತಾಯಿಗಳನ್ನ ಬೀದಿಗೆ ತಳ್ಳೋದನ್ನ ನಾವೆಲ್ಲ ನೋಡಿದ್ದೇವೆ, ಕೇಳಿದ್ದೇವೆ. ಇನ್ನು ಇದರ ಹೊರತಾಗಿಯೂ ಬೀದಿಗೆ ಬಂದ ಅದೆಷ್ಟೋ ಒಂಟಿ ವೃದ್ಧ ಜೀವಗಳು ಪ್ರತಿದಿನ ನಮ್ಮ ಕಣ್ಣಿಗೆ ಬೀಳುತ್ತಾರೆ. ಆದರೆ ಕಣ್ಣಿಗೆ ಬೀಳೋ ಈ ಹಿರಿಯ ಅನಾಥ ವೃದ್ಧರನ್ನ ಒಂದು ಕ್ಷಣ ನೋಡಿ, ಅಯ್ಯೋ ಪಾಪ ಅಂತ ಮುಂದೆ ಹೆಜ್ಜೆ ಹಾಕೋದು ನಮ್ಮ ಜೀವನ ಶೈಲಿಯಾಗಿಬಿಟ್ಟಿದೆ.ಅಂಥವೃದ್ಧ ಜೀವಗಳ ಸಮಸ್ಯೆ ಆಲಿಸೋಕೆ ಯಾರೂ ಸಹ ಮುಂದಾಗೊದಿಲ್ಲ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಮುದ್ರಣ ಕಾಶಿಯಲ್ಲಿ ಅತ್ಯಂತ ಸಣ್ಣ ವಯಸ್ಸಿನ ನಗರಸಭೆ ಅಧ್ಯಕ್ಷೆ ಎನಿಸಿಕೊಂಡಿರೋ ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ ಈ ರೀತಿ ಮೈ ಕೊರೆಯುವ ಚಳಿಯಲ್ಲಿ ಸಿಕ್ಕು ನಲುಗುತ್ತಿದ್ದ ವೃದ್ಧನೋರ್ವನಿಗೆ ಆರೈಕೆ ಮಾಡಿ ಆಶ್ರಯ ಕೊಡಿಸಿದ್ದಾರೆ.
ಹೌದು..ಎಲ್ಲವೂ ಇದ್ದು ಬೀದಿಗೆ ಬಿದ್ದು ಏನೂ ಇಲ್ಲದೆ ನರಕ ಅನುಭವಿಸಿ ಚಳಿಯಲ್ಲಿ ಮಳೆಯ ಗಾಳಿಗೆ ನಡುಗುತ್ತಾ ಕೂತಿದ್ದ ವೃದ್ಧನಿಗೆ ನಗರಸಭೆ ಅಧ್ಯಕ್ಷೆ ಉಷಾ ದಾಸರ, ವೃದ್ಧನ ಕುಶಲೋಪರಿ ವಿಚಾರಿಸಿ ಆತನಿಗೆ ಆರೈಕೆಗೈದು ಹೆಣ್ಣು ಮಮತೆಗೆ ಸಾಕ್ಷಿ ಅನ್ನೋದನ್ನ ತೋರಿದ್ದಾರೆ.
ಎಂದಿನಂತೆ ತಮ್ಮ ಸಾಮಾಜಿಕ ಕೆಲಸ ಮುಗಿಸಿ ಮನೆಯತ್ತ ತೆರಳುತ್ತಿದ್ದ ಉಷಾ ಅವರಿಗೆ, ಗದಗ ಜಿಲ್ಲಾ ಬಿಜೆಪಿ ಕಾರ್ಯಾಲಯದ ಕೆಳಗಡೆ ಇರುವ ವಾಣಿಜ್ಯ ಮಳಿಗೆಗಳ ಮುಂದೆ ಕೂತಿರೋ ವೃದ್ಧ ಇವರ ಕಣ್ಣಿಗೆ ಬಿದ್ದಿದ್ದಾನೆ.ತಕ್ಷಣ ಕಾರು ನಿಲ್ಲಿಸಿ ವೃದ್ಧನ ಹತ್ತಿರ ಬಂದು ಆತನ ಆರೋಗ್ಯ ವಿಚಾರಿಸಿದ್ದಾರೆ.ವೃದ್ಧ ಯಾವದೋ ವೈಯಕ್ತಿಕ ಸಮಸ್ಯೆಯಿಂದ ಈ ರೀತಿ ಬೀದಿಯಲ್ಲಿ ನರಕ ಅನುಭವಿಸುತ್ತಿರೋದನ್ನ ತಿಳಿದ ಅಧ್ಯಕ್ಷೆ ಉಷಾ ಅವರು,ತಕ್ಷಣ ಜಿಮ್ಸ್ ಅಟನಾಮಿ ವಿಭಾಗದ ಮುಖ್ಯಸ್ಥ ಪಿ.ಎಸ್.ಭೂಸರಡ್ಡಿಯವರಿಗೆ ಕರೆ ಮಾಡಿ ಅಸ್ವಸ್ಥರಾಗಿರುವ ವೃದ್ಧನಿಗೆ ಒಂದು ವಾರಗಳ ಕಾಲ ಚಿಕಿತ್ಸೆ ನೀಡುವಂತೆ ಸೂಚಿಸಿ, ಸ್ಥಳಕ್ಕೆ ಆ್ಯಂಬುಲೆನ್ಸ್ ಕರೆಸಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಅದೇನೆ ಇರಲಿ..ಇಂಥಹ ನೊಂದ ಜೀವಗಳ ಹತ್ತಿರ ಸಾಮಾನ್ಯರೂ ಸಹ ಹತ್ತಿರ ಸುಳಿಯೋಕೆ ಹಿಂದೆ ಮುಂದೆ ನೋಡೋ ಈ ಇವತ್ತಿನ ಕಾಲದಲ್ಲಿ, ನಗರದ ಪ್ರಥಮ ಪ್ರಜೆ ಎನಿಸಿಕೊಂಡ ನಗರಸಭೆ ಅಧ್ಯಕ್ಷರೋರ್ವರು ಹಿರಿಯ ಜೀವಕ್ಕೆ ಸ್ಪಂದಿಸಿರೋದು ಜನತೆಯ ಮೆಚ್ಚುಗೆಗೆ ಕಾರಣವಾಗಿದೆ.
PublicNext
16/08/2022 10:01 pm