ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೇನಾ ಶ್ವಾನ ಅಕ್ಸಲ್ ಭಾವಪೂರ್ಣ ವಿದಾಯ

ಬೆಂಗಳೂರು: ಕಾಶ್ಮೀರದಲ್ಲಿ 50ಕ್ಕೂ ಹೆಚ್ಚು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದ ಸೇನಾ ನಾಯಿ ಅಕ್ಸಲ್ ಜಮ್ಮುಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆಗಳಿಗೆ ಹೆಚ್ಚಿನ ನೆರವು ನೀಡಿತ್ತು.ಸದ್ಯ "ಅಕ್ಸಲ್" ನಿನ್ನೆ ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಯೋತ್ಪಾದಕರೊಂದಿಗಿನ ಕಾರ್ಯಾಚರಣೆಯಲ್ಲಿ ಕರ್ತವ್ಯ ನಿರತವಾಗಿತ್ತು. ಈ ಸಮಯದಲ್ಲಿ ಉಗ್ರರ ಎನ್ ಕೌಂಟರ್ ನಲ್ಲಿ ಹುತಾತ್ಮವಾಗಿದೆ.

ಅದೆಷ್ಟೋ ಸಂದರ್ಭದಲ್ಲಿ ಉಗ್ರರ ಜಾಡು ಹಿಡಿದು ನಮ್ಮನ್ನ ರಕ್ಷಿಸಿದೆ ಎಂದು ಹಿರಿಯ ಸೇನಾ ಅಧಿಕಾರಿಗಳು ಅಕ್ಸಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಲ್ಜಿಯಂ ಜಾತಿಯ ಅಕ್ಸಲ್ ಉಗ್ರರ ವಿರುದ್ಧ ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ, ಹತ್ತಾರು ಸೇನಾನಾಯಕರ ಜೀವ ಉಳಿಸಿತ್ತು. ಇದೀಗ ಹುತಾತ್ಮನಾಗಿರುವ ಅಕ್ಸಲ್ ಬಗ್ಗೆ ಮೆಚ್ಚುಗೆಯ ಭಾವ ವ್ಯಕ್ತವಾಗ್ತಿದೆ. ಅಕ್ಸಲ್ ನ ಆತ್ಮಕ್ಕೆ ಸದ್ಘತಿ ಪ್ರಾಪ್ತಿಯಾಗಲಿ..ಓಂ ಶಾಂತಿ..

Edited By : Nirmala Aralikatti
PublicNext

PublicNext

31/07/2022 10:57 pm

Cinque Terre

22.56 K

Cinque Terre

10

ಸಂಬಂಧಿತ ಸುದ್ದಿ