ಚೆನ್ನೈ: ಭಿಕ್ಷುಕನೊಬ್ಬ ಭಿಕ್ಷಾಟನೆಯಿಂದ ಬಂದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿವ ಮೂಲಕ ಹಣ ಹಣ ಎಂದು ಸಾಯುವವರಿಗೆ ಮಾದರಿಯಾಗಿದ್ದಾರೆ.ಹೆಸರು ಪೂಲಪಾಂಡಿಯನ್. ಇವರಿಗೆ 72 ವಯಸ್ಸು. ತಮಿಳುನಾಡಿನ ತೂತುಕುಡಿಯ ನಿವಾಸಿ. ಭಿಕ್ಷೆ ಬೇಡುವುದೇ ಇವರ ಕಾಯಕ. ಆದರೆ, ಭಿಕ್ಷೆಯ ಹಣವನ್ನು ದಾನ ಮಾಡುವುದೇ ಇವರಿಗೆ ಸಂತೋಷದಾಯಕವಂತೆ.
ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವು ಉದ್ದೇಶಕ್ಕಾಗಿ ಇದುವರೆಗೂ ಇವರು ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಬರೋಬ್ಬರಿ 55.60 ಲಕ್ಷ ರೂಪಾಯಿ ಹಣವನ್ನು ದಾನ ಮಾಡಿದ್ದಾರೆ.ಇತ್ತೀಚೆಗೆ ಅಂದರೆ, ಕಳೆದ ಸೋಮವಾರ ವೆಲ್ಲೂರು ಜಿಲ್ಲಾಧಿಕಾರಿ ಬಳಿ ತೆರಳಿ 10 ಸಾವಿರ ರೂಪಾಯಿ ದಾನ ಮಾಡಿದ್ದು, ಶ್ರೀಲಂಕಾ ತಮಿಳಿಗರ ನೆರವಿಗಾಗಿ ಬಳಸಿಕೊಳ್ಳಿ ಎಂದು ಹೇಳಿದ್ದಾರೆ.
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ಅಲ್ಲಿನ ತಮಿಳಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರಿಗೆ ಸೂಕ್ತ ನೆರವು ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು. ಭಿಕ್ಷೆ ಬೇಡಿದ ಹಣವನ್ನು ಜನರ ಮೂಲಸೌಕರ್ಯಗಳಿಗೆ ವ್ಯಯಿಸುತ್ತಿರುವ ಈ ಭೀಕ್ಷುಕ ನಿಜಕ್ಕೂ ಗ್ರೇಟ್ ಅಲ್ಲವೇ…
PublicNext
27/07/2022 03:27 pm