ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಗ್ಲೀಷ್ ಬಾರದಿದ್ದಕ್ಕೆ ಅವಮಾನಕ್ಕೀಡಾದವಳು ಈಗ ಐಎ‌ಎಸ್ ಅಧಿಕಾರಿ!

ಭೋಪಾಲ್: ವರ್ಷಕ್ಕೆ ಲಕ್ಷಾಂತರ ಜನ ಯುಪಿಎ‌ಸ್‌ಸಿ ಪರೀಕ್ಷೆ ಬರೆಯುತ್ತಾರೆ‌. ಅದರಲ್ಲಿ ಕೆಲವರು ಮಾತ್ರ ಪರೀಕ್ಷೆ ತೇರ್ಗಡೆ ಹೊಂದುತ್ತಾರೆ‌. ಆ ಮೂಲಕ ಐಎ‌ಎಸ್, ಐಪಿಎಸ್ ಅಧಿಕಾರಿಗಳಾಗುತ್ತಾರೆ‌.

ಈ ನಡುವೆ ಯುಪಿಎಸ್‌ಸಿ ಹೋರಾಟದಲ್ಲಿ ಅನೇಕರು ಅನೇಕ ಬಗೆಯ ಕೀಳರಿಮೆ, ಹಿಂಜರಿಕೆಗಳನ್ನು ಅನುಭವಿಸಿರುತ್ತಾರೆ. ಇದೇ ರೀತಿ ಇಂಗ್ಲೀಷ್ ಬರೋದಿಲ್ಲ ಎಂಬ‌ ಕಾರಣಕ್ಕೆ ಅವಮಾನಕ್ಕೀಡಾಗಿದ್ದ ಆಕೆ ಈಗ ಮೊದಲ ಪ್ರಯತ್ನದಲ್ಲೇ‌ ಐಎ‌ಎಸ್ ತೇರ್ಗಡೆ ಹೊಂದಿದ್ದಾರೆ. ಮಧ್ಯಪ್ರದೇಶದ ಕುಗ್ರಾಮದ ಸುರಭಿ ಗೌತಮ್ ಎಂಬುವರು ಈಗ ಐಎ‌ಎಸ್ ಅಧಿಕಾರಿ. ಇಂಜಿನಿಯರಿಂಗ್ ಪದವೀಧರೆಯಾದ ಸುರಭಿಯ ಇಂಗ್ಲೀಷ್ ಸಂವಹನ ಉತ್ತಮವಾಗಿಲ್ಲ ಎಂಬ ಕಾರಣಕ್ಕೆ ಹಲವು ಬಾರಿ ಇತರರಿಂದ ಟೀಕೆಗೊಳಗಾಗಿದ್ದಳು.

ಇಂಗ್ಲೀಷ್‌ ಅನ್ನು ತಪ್ಪು ತಪ್ಪಾಗಿ ಮಾತನಾಡುತ್ತಾರೆಂದು ಸಹಪಾಠಿಗಳೇ ಆಕೆಯನ್ನು ಹೀಯಾಳಿಸುತ್ತಿದ್ದರು. ಆದರೆ, ತನ್ನನ್ನು ತಿವಿಯುವ ಸ್ನೇಹಿತರ ಮಾತಿಗೆ ತಲೆ ಕೆಡಿಸಿಕೊಳ್ಳದ ಸುರಭಿ, ತನ್ನ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ಪ್ರಯತ್ನವನ್ನೂ ಬಿಟ್ಟಿರಲಿಲ್ಲ. ಬದಲಾಗಿ ಅವರು ಜೀವನದಲ್ಲಿ ಯಶಸ್ಸು ಗಳಿಸುವ ಮೂಲಕ ಆಡಿಕೊಳ್ಳುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡೋಣವೆಂದು ನಿರ್ಧರಿಸಿದ್ದರು.

ಅಲ್ಲದೇ, ಪ್ರತಿ ದಿನ 10 ಹೊಸ ಇಂಗ್ಲೀಷ್‌ ಪದಗಳನ್ನು ಕಲಿಯುತ್ತಾ ಹೋದ ಆಕೆ, ಆಂಗ್ಲ ಭಾಷೆಯ ಮೇಲೂ ಹಿಡಿತ ಸಾಧಿಸುತ್ತಾ ಹೋದಳು. 2016ರಲ್ಲಿ ದೇಶದ ಅತ್ಯಂತ ಕ್ಲಿಷ್ಟಕರ ಪರೀಕ್ಷೆಗಳಲ್ಲೊಂದಾದ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯನ್ನು ತೇಗ್ಡೆ ಹೊಂದಿದ ಸುರಭಿ 50ನೇ ರ‍್ಯಾಂಕ್ ಗಳಿಸಿದಳು. ಸದ್ಯ ಅಹಮದಾಬಾದ್‌ ಜಿಲ್ಲೆಯ ವಿರಾಮ್‌ಗಾಮ್‌ನಲ್ಲಿ ಸಹಾಯಕ ಕಲೆಕ್ಟರ್‌ ಆಗಿರುವ ಐಎಎಸ್‌ ಅಧಿಕಾರಿ ಸುರಭಿ ಗೌತಮ್‌ ಸೇವೆ ಸಲ್ಲಿಸುತ್ತಿದ್ದಾಳೆ.

Edited By : Nagaraj Tulugeri
PublicNext

PublicNext

26/07/2022 12:02 pm

Cinque Terre

23.42 K

Cinque Terre

3