ರಾಯ್‌ಪುರ್: ಹಣವಿಲ್ಲದ್ದಕ್ಕೆ ಕುಟುಂಬಸ್ಥರೇ ಮಹಿಳೆಯೋರ್ವಳ ಮೃತದೇಹವನ್ನ ಮಂಚದಲ್ಲಿಟ್ಟು ಆಸ್ಪತ್ರೆಯಿಂದ 10 ಕಿ.ಮೀ.ವರೆಗೆ ಹೊತ್ತು ಸಾಗಿದ ಹೃದಯವಿದ್ರಾವಕ ಘಟನೆ ಛತ್ತೀಸ್ಗಢದ ದಂತೇವಾಡದಲ್ಲಿ ನಡೆದಿದೆ.
ದಂತೇವಾಡದ ಕುಕೊಂಡಾ ಬ್ಲಾಕ್ನ ಟಿಕನ್ಪಾಲ್ ನಿವಾಸಿ ಜೋಗಿ ಪೋಡಿಯಂ ಎಂಬ ಮಹಿಳೆ ಅನಾರೋಗ್ಯದಿಂದ ರೆಂಗಾನಾರ್ನಲ್ಲಿ ಸಾವನ್ನಪ್ಪಿದ್ದರು. ಹಣದ ಇಲ್ಲದ ಹಿನ್ನೆಲೆಯಲ್ಲಿ ಆಕೆಯ ಮೃತದೇಹವನ್ನ ಮಂಚದಲ್ಲಿಟ್ಟುಕೊಂಡು ಹೆಗಲ ಮೇಲೆ ಹೊತ್ತು ಕಾಲ್ನಡಿಗೆ ಮೂಲಕ 20 ಕಿ.ಮೀ. ದೂರದಲ್ಲಿರುವ ಗ್ರಾಮಕ್ಕೆ ತೆರಳಿದ್ದರು. ಸುಮಾರು 10 ಕಿ.ಮೀ.ವರೆಗೆ ಸಾಕಿದ್ದ ಕುಟುಂಬವನ್ನು ಪೊಲೀಸರು ನೋಡಿ ಅವರಿಗೆ ವಾಹನದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ಅಂತ್ಯಕ್ರಿಯೆ ನಡೆಸಲು ಪೊಲೀಸರು ನಗದು ಸಹಾಯ ಮಾಡಿದ್ದಾರೆ.
PublicNext
18/07/2022 11:02 am