ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತಿ ಅಗಲಿಕೆಯ ನೋವಲ್ಲೇ ಪ್ರಾಣಬಿಟ್ಟ ಪತ್ನಿ : ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಹಾವೇರಿ : ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಇಚ್ಚಂಗಿ ಗ್ರಾಮದಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.

ನಿನ್ನ ಬಿಟ್ಟು ನಾ ಹ್ಯಾಂಗ ಇರಲಿ ಇದು ಜನುಮದ ಜೋಡಿಯ ಅಮರ ಪ್ರೇಮದ ಕಥೆ.

ಹೌದು ಅನಾರೋಗ್ಯದಿಂದ ಬಸಪ್ಪ ಕಂಬಳಿ ಮೃತಪಟ್ಟಿದ್ದಾರೆ ಮೃತ ಬಸಪ್ಪ ಕಂಬಳಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು. ಇನ್ನು ಪತಿ ಅಗಲಿಕೆಯಿಂದ ತೀವ್ರ ನೊಂದಿದ್ದ ದ್ಯಾಮವ್ವ ಕಂಬಳಿ ( 85) ನಿಧನರಾಗಿದ್ದಾರೆ.

ಈ ಮೂಲಕ ಈ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ನಿನ್ನೆ ಸಂಜೆ ಬಸಪ್ಪ ಕಂಬಳಿ ಸಾವನ್ನಪ್ಪಿದ್ದರು ಇವರ ಪತ್ನಿ ದ್ಯಾಮವ್ವ ಇಂದು ಬೆಳಿಗ್ಗೆ ಅಸುನೀಗಿದ್ದಾರೆ.

ಇನ್ನು ಸಾವಿನಲ್ಲೂ ಸತಿ ಪತಿ ಒಂದಾಗಿರುವುದನ್ನು ಕಂಡ ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ.

70 ವರ್ಷ ಸಾರ್ಥಕ ಜೀವನ ನಡೆಸಿದ್ದ ಅಜ್ಜ- ಅಜ್ಜಿ ಸಾವಿನಲ್ಲೂ ಒಂದಾಗಿದ್ದಾರೆ. ಮಕ್ಕಳು , 12 ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.

ಒಟ್ಟಾರೆಯಲ್ಲಿ ವೃದ್ದ ದಂಪತಿ ಸಾವಿಗೆ ಇಡೀ ಊರಿಗೂರೇ ಕಣ್ಣೀರಿಟ್ಟಿದ್ದಾರೆ.

Edited By : Nagesh Gaonkar
PublicNext

PublicNext

13/07/2022 06:28 pm

Cinque Terre

77.14 K

Cinque Terre

3

ಸಂಬಂಧಿತ ಸುದ್ದಿ