ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಯಂ ವಿವಾಹವಾದ ಕ್ಷಮಾ ಬಿಂದು: ಹೆಚ್ಚಿದ ವಿರೋಧ 2 ದಿನ ಮೊದಲೇ ಮದುವೆ

ಅಹಮದಾಬಾದ್: ಕಳೆದ ಕೆಲವು ದಿನಗಳಿಂದ ತನ್ನನ್ನು ತಾನು ಮದುವೆಯಾಗುತ್ತೇನೆ ಎಂದು ಹೇಳಿದ ಯುವತಿಯೊಬ್ಬಳು ಸುದ್ದಿಯಲ್ಲಿದ್ದಳು. ಸದ್ಯ ಆಕೆ ತನ್ನನ್ನು ತಾನು ಮದುವೆಯಾಗಿದ್ದಾಳೆ.ಹೌದು ಗುಜರಾತ್ ನ ಕ್ಷಮಾ ಬಿಂದು ‘ಸ್ವಯಂ ವಿವಾಹ‘ ಸಂಪ್ರದಾಯದಂತೆ ನಡೆದಿದೆ.

ತನ್ನನ್ನು ತಾನೇ (ಸ್ವಯಂ ಮದುವೆ) ವಿವಾಹವಾಗಿರುವುದು ಭಾರತದಲ್ಲಿ ಇದೇ ಮೊದಲು. ಮದುವೆಯ ಬಳಿಕ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು ಸ್ವಯಂ ಮದುವೆಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ನನ್ನ ಈ ಮದುವೆಗೆ ಬೆಂಬಲ ನೀಡಿದ, ಅಭಿನಂದಿಸಿದ, ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ರವಾನಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ಜೂನ್ 11ಕ್ಕೆ ದೇವಾಲಯದಲ್ಲಿ ಕ್ಷಮಾ ಬಿಂದು ಸ್ವಯಂ ಮದುವೆಗೆ ವಿವಾಹ ನಿಗದಿಯಾಗಿತ್ತು. ಇದಕ್ಕೆ ಸ್ಥಳೀಯ ರಾಜಕಾರಣಿಗಳು ಹಾಗೂ ಪುರೋಹಿತರು ವಿರೋಧ ವ್ಯಕ್ತಪಡಿಸಿದ್ದರು. ಈ ಮದುವೆ ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದೆ, ದೇವಾಲಯದಲ್ಲಿ ವಿವಾಹ ನಡೆಯಲು ಅವಕಾಶ ಕಲ್ಪಿಸುವುದಿಲ್ಲ ಎಂದು ಹೇಳಿದ್ದರು. ಈ ರೀತಿಯ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ದಿನ ಮೊದಲೇ ಸ್ವಯಂ ವಿವಾಹವಾಗಿದ್ದಾರೆ.

ಸಂಪ್ರದಾಯ ಪ್ರಕಾರವಾಗಿ ಮೆಹಂದಿ ಹಾಗೂ ಹಳದಿ ಕಾರ್ಯಕ್ರಮಗಳು ನಡೆದವು. ಸ್ವತ: ಅವರೇ ತಾಳಿ ಕಟ್ಟಿಕೊಂಡರು ಎಂದು ಕ್ಷಮಾ ಬಿಂದು ಗೆಳೆಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

09/06/2022 04:31 pm

Cinque Terre

49.08 K

Cinque Terre

12

ಸಂಬಂಧಿತ ಸುದ್ದಿ