ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನ ಶವ ಬೈಕ್ ಮೇಲೆ ಹೊತ್ತು ತಂದ ಅಪ್ಪ-ಮಾನವೀಯತೆ ಮರೆತ ಆಸ್ಪತ್ರೆ ಸಿಬ್ಬಂದಿ

ಆಂಧ್ರಪ್ರದೇಶ: ಮಾನವೀಯತೆ ಅನ್ನೋದು ಈಗ ಮರೆಯಾಗಿದೆ. ಎಂತಹ ಕಷ್ಟ ಬಂದ್ರೆ ಆಗ ಒಬ್ಬರಿಗೆ ಒಬ್ಬರು ಸಾಥ್ ಕೊಡ್ತಿದ್ದರು. ಸಾವು ಸಂತ ಬಂದ್ರೆ ಆಸ್ಪತ್ರೆಯವರೂ ಮುಂದೆ ಬರ್ತಿದ್ದರು.ಆದರೆ, ಈಗ ಅದೆಲ್ಲವೂ ಇಲ್ಲವೇ ಇಲ್ಲ.ಅದಕ್ಕೆ ತಾಜಾ ಸಾಕ್ಷಿ ಎಂಬಂತೆ ಇಲ್ಲೊಂದು ಘಟನೆ ನಡೆದು ಹೋಗಿದೆ.

ಆಂಧ್ರ ಪ್ರದೇಶದ ನಲ್ಲೂರು ಜಿಲ್ಲೆಯ ಸಂಗಮ್ ಗ್ರಾಮದಲ್ಲಿ ತಂದೆ ತನ್ನ ಮಗನ ಶವನ್ನ ಹೆಗಲ ಮೇಲೆ ಹೊತ್ತು ಕೊಂಡು ಬಂದಿದ್ದಾರೆ. ಸಾಲದಕ್ಕೆ ಗೆಳೆಯ ಬೈಕ್ ಮೇಲೆ ಕುಳಿತು ಮಗನ ಶವವನ್ನ ಮನೆವರೆಗೂ ತೆಗೆದುಕೊಂಡು ಬಂದಿದ್ದಾರೆ.

ಬಾಲಕ ಶ್ರೀರಾಮ್ ಕಾಲುವೆಯಲ್ಲಿ ಮುಳುಗಿದ್ದಾನೆ. ಆ ಕೂಡಲೇ ಈ ಬಾಲಕನನ್ನ ತಂದೆ ಹತ್ತಿರದ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದಾರೆ. ಆದರೆ ದುರಂತ ನೋಡಿ, ಮಗ ಮೃತಪಟ್ಟಿದ್ದಾನೆ ಅನ್ನೋ ವಿಷಯ ಕೇಳಿ ತಂದೆಗೆ ದುಃಖ ಆಗಿದೆ. ಅದೇ ದುಃಖದಲ್ಲಿಯೇ ತಂದೆ ಮಗನ ಶವ ಸಾಗಿಲು ಆಂಬ್ಯುಲೆನ್ಸ್ ಚಾಲಕನಿಗೆ ಮನವಿ ಮಾಡಿದ್ದಾರೆ. ಆದರೆ,ಆತ ನಿರಾಕರಿಸಿದ್ದಾನೆ. ಇದರ ಪರಿಣಾಮ ತಂದೆ ಗೆಳೆಯನ ಬೈಕ್ ಮೇಲೆ ಕುಳಿತು ಮನಗ ಶವ ಹೊತ್ತುಕೊಡು ಮನೆಗೆ ಬಂದಿದ್ದಾರೆ.

ಈ ದೃಶ್ಯದ ವೀಡಿಯೋ ಕಂಡ ಪ್ರತಿಪಕ್ಷದ ನಾಯಕ ಚಂದ್ರಬಾಬು ನಾಯ್ಡು, ಮುಖ್ಯಮಂತ್ರಿ ವೈ.ಎಸ್.ಜಗನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ನೊಂದ ತಂದೆ ಆಂಬುಲೆನ್ಸ್ ಮೊರೆ ಇಟ್ಟರು ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದೆ ಇರೋದು ವಿಷಾದನೀಯ ಅಂತಲೂ ಬೇಸರ ವ್ಯಕ್ತಪಡಿಸಿದ್ದಾರೆ.

Edited By : Manjunath H D
PublicNext

PublicNext

06/05/2022 01:52 pm

Cinque Terre

65.52 K

Cinque Terre

17

ಸಂಬಂಧಿತ ಸುದ್ದಿ