ಪಾಟ್ನಾ: ಬಿಹಾರದಲ್ಲಿ ವಿಶಿಷ್ಟ ಮದುವೆಯೊಂದು ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು. ಬಿಹಾರದ ಭಾಗಲ್ಪುರದಲ್ಲಿ 36 ಇಂಚು ಎತ್ತರದ ವರನ ಜೊತೆ 34 ಇಂಚು ಎತ್ತರದ ವಧು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಅಭಿಯಾ ಬಜಾರ್ ನಿವಾಸಿ ಕಿಶೋರಿ ಮಂಡಲ್ ಅವರ ಪುತ್ರಿ ಮಮತಾ ಕುಮಾರಿ(24) ಮಸಾರು ನಿವಾಸಿ ಬಿಂದೇಶ್ವರಿ ಅವರ ಪುತ್ರ ಮುನ್ನಾ ಭಾರತಿ (26) ಜೊತೆ ವಿವಾಹವಾಗಿದ್ದಾರೆ. ಈ ವಿಭಿನ್ನ ಮದುವೆ ನೋಡಲು ಸಾವಿರಾರು ಜನರು ಆಗಮಿಸಿದ್ದರು. ಜೊತೆಗೆ ವಧು-ವರರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.
PublicNext
04/05/2022 10:28 pm