ನವದೆಹಲಿ: ಹುತಾತ್ಮ ಮಗನ ಫೋಟೋಗೆ ಮುತ್ತಿಟ್ಟು ತಾಯಿಯೊಬ್ಬರು ಕಣ್ಣೀರಿಟ್ಟು ಭಾವುಕರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯ ದೋರ್ನಪಾಲ್‍ನದ್ದಾಗಿದೆ. ಹುತಾತ್ಮ ಯೋಧರಿಗಾಗಿ ಇಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹುತಾತ್ಮರ ಕುಟುಂಬಗಳು ಆಗಮಿಸಿದ್ದರು. ಇದೇ ವೇಳೆ ಹುತಾತ್ಮ ಯೋಧನ ತಾಯಿ ತನ್ನ ಮಗನ ಫೋಟೋವನ್ನು ನೋಡುತ್ತಿದ್ದಂತೆಯೇ ಅವರ ಕಣ್ಣುಗಳಿಂದ ನೀರು ಜಿನುಗಿದೆ. ತಾಯಿ ಪೋಸ್ಟರ್‌ನಲ್ಲಿರುವ ತನ್ನ ಹುತಾತ್ಮ ಮಗನ ಫೋಟೋಗೆ ಪದೇ ಪದೇ ಮುತ್ತಿಟ್ಟರು. ಈ ವೀಡಿಯೋ ಎಲ್ಲರ ಮನಕರಗಿಸುವಂತಿದೆ.
PublicNext
25/04/2022 08:08 am