ನವದೆಹಲಿ: ಯುವಕನೊಬ್ಬ ಬ್ಯಾಗ್ ಹಾಕಿಕೊಂಡು ಮಧ್ಯರಾತ್ರಿ ನೋಯ್ಡಾ ರಸ್ತೆಯಲ್ಲಿ ಓಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈತ ರಸ್ತೆಯಲ್ಲಿ ಓಡಾಡೋದು ಯಾಕೆ? ಈತನ ಗುರಿ ಏನು ಅಂತ ಕೇಳಿದ್ರೆ ನಿಜಕ್ಕೂ ಈತನನ್ನು ಮೆಚ್ಚಬೇಕು ಅಂತ ಅನಿಸುತ್ತದೆ.
19 ವರ್ಷದ ಯುವಕ ಪ್ರದೀಪ್ ಮೆಹ್ರಾ ರಾತ್ರಿ ಕೆಲಸ ಮುಗಿಸಿ ಓಡುತ್ತಾ ವಾಪಸ್ ಮನೆಗೆ ಹೋಗುತ್ತಿರುತ್ತಾನೆ. ಈ ವಿಡಿಯೋವನ್ನು ಸಿನಿಮಾ ನಿರ್ಮಾಪಕ ವಿನೋದ ಕಪ್ರಿ ಅವರು ಟ್ವೀಟ್ ಮಾಡಿ, "ನಿನ್ನೆ ರಾತ್ರಿ 12 ಗಂಟೆಗೆ ನೋಯ್ಡಾದ ರಸ್ತೆಯಲ್ಲಿ ಈ ಹುಡುಗ ಬ್ಯಾಗ್ ಹಾಕಿಕೊಂಡು ವೇಗವಾಗಿ ಓಡುತ್ತಿರುವುದನ್ನು ನಾನು ನೋಡಿದೆ. ಅವನಿಗೆ ತೊಂದರೆ ಇರಬಹುದು ಎಂದು ಯೋಚಿಸಿ ಲಿಫ್ಟ್ ಕೊಡಬೇಕು ಎಂದುಕೊಂಡೆ. ಪದೇ ಪದೇ ಲಿಫ್ಟ್ ಕೊಡಬೇಕಾ ಎಂದು ಕೇಳಿದಾಗಲೂ ಆತ ನಿರಾಕರಿಸಿದ. ಕಾರಣ ಕೇಳಿದರೆ ಈ ಮಗುವಿನ ಮೇಲೆ ಪ್ರೀತಿ ಮೂಡಿತು" ಎಂದು ಬರೆದುಕೊಂಡಿದ್ದಾರೆ.
ನಾನು ಸೇನೆಯನ್ನು ಸೇರಬೇಕು. ದೇಶದ ಬಗ್ಗೆ ಅಪಾರ ಪ್ರೇಮವನ್ನು ಹೊಂದಿರುವ ಯುವಕನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತದೆ. ನನಗೆ ಹಗಲಿನಲ್ಲಿ ಓಡಲು ಸಮಯ ಸಿಗುವುದಿಲ್ಲ. ಕೆಲಸ ಮುಗಿಸಿ ಮಧ್ಯರಾತ್ರಿ ಓಡಿ ಮನೆಗೆ ಸೇರುತ್ತೇನೆ ಎಂದು ಯುವಕ ಹೇಳಿದ್ದಾನೆ.
PublicNext
21/03/2022 04:55 pm