ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನನ್ನ ಮಗನ ಮುಖವನ್ನು ತೋರಿಸಿ ಪ್ಲೀಸ್: ದೇವರೇ ನಿನೇಷ್ಟು ಕ್ರೂರಿ ಕರುಳಿನಕುಡಿ ರಕ್ಷಿಸದೇ ಹೋದೆಯಾ?

ಹಾವೇರಿ: ಅದೊಂದು ಕೆಲವೇ ಕೆಲವು ಮನೆಗಳಿರುವ ಪುಟ್ಟಗ್ರಾಮ. ಪ್ರತಿದಿನವೂ ಆ ಗ್ರಾಮದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹಬ್ಬದ ವಾತಾವರಣವೇ ಮೈದುಂಬಿರುತ್ತಿತ್ತು. ಆದರೆ ಆ ಗ್ರಾಮ ಕಳೆದ ಎರಡು ದಿನಗಳಿಂದ ಶೋಕ ಸಾಗರದಲ್ಲಿ ಮುಳುಗಿದೆ. ಯಾವುದೇ ಜನಪ್ರತಿನಿಧಿಗಳು ಬಂದರೂ ಆ ಗ್ರಾಮದಲ್ಲಿ ಮಾತ್ರ ಶೋಕದ ವಾತಾವರಣ ಮರೆಯಾಗಿಲ್ಲ. ಅಷ್ಟಕ್ಕೂ ಯಾವುದು ಆ ಗ್ರಾಮ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...

ಎಲ್ಲೆಂದರಲ್ಲಿ ಗುಂಪುಕಟ್ಟಿಕೊಂಡು ನಿಂತಿರುವ ಜನರು. ಮಗನ ಬರುವಿಕೆಗಾಗಿ ಕಾಯುತ್ತ ತಲೆಯ ಮೇಲೆ ಕೈ ಹೊತ್ತು ಕುಳಿತಿರುವ ಕುಟುಂಬಸ್ಥರು. ಇದೆಲ್ಲದಕ್ಕೂ ಸಾಕ್ಷಿಯಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೇರಿ. ಹೌದು.. ಮಗ ಓದಿಕೊಂಡು ಬರುತ್ತಾನೆ ಎಂಬುವ ನಿರೀಕ್ಷೆಯಲ್ಲಿದ್ದ ಕುಟುಂಬದವರು. ನಮ್ಮೂರಿನಲ್ಲಿ ಆಸ್ಪತ್ರೆ ಕಟ್ಟಿ ನಮ್ಮೆಲ್ಲರ ರೋಗವನ್ನು ನಿವಾರಣೆ ಮಾಡುತ್ತಾನೆ ಎಂದುಕೊಂಡಿದ್ದ ಗ್ರಾಮಸ್ಥರ ಆಸೆ ಕನಸು ನುಚ್ಚು ನೂರಾಗಿದೆ. ನಿನ್ನೆ ನಡೆದ ಶೆಲ್ ಬಾಂಬ್ ದಾಳಿಯಲ್ಲಿ ಕೊನೆಯುಸಿರೆಳೆದ ನವೀನ್ ಊರಲ್ಲಿ ದುಃಖ ಮಡುಗಟ್ಟಿದೆ. ರಷ್ಯಾ ಉಕ್ರೇನ್ ನಡುವಿನ ರಣಬೀಕರ ಯುದ್ಧ ಈ ಊರಿನ ಮಗನನ್ನು ಬಲಿ ಪಡೆದಿದ್ದು, ಊರಿಗೆ ಊರೇ ಕಣ್ಣೀರು ಹಾಕುತ್ತಿದೆ. ಹೆತ್ತಕರುಳಿನ ದುಃಖವಂತೂ ಹೇಳ ತೀರದಾಗಿದೆ. ಒಂದು ಸಾರಿಯಾದರೂ ನನ್ನ ಮಗನ ಮುಖ ನೋಡಲು ಅವಕಾಶ ಕೊಡಿ ಪ್ಲೀಸ್...

ತುಂಬಿದ ಕುಟುಂಬದಲ್ಲಿ ಹುಟ್ಟಿ ಬೆಳೆದ ಕುಡಿಯೊಂದು ಅಕಾಲಿಕವಾಗಿಯೇ ಸಾವನ್ನಪ್ಪಿದ್ದು, ಹೆತ್ತವರಿಗೆ ಈ ನೋವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನೂ ಒಂದೆ ತಟ್ಟೆಯಲ್ಲಿ ಊಟ ಮಾಡಿ ಅಂಗಳದಲ್ಲಿ ಆಡಿ ಬೆಳೆದ ಆತನ ಸಹೋದರನ ದುಃಖ ಹೃದಯದ ಅಂತರಾಳದಲ್ಲಿಯೇ ಮಡುಗಟ್ಟಿದೆ. ಇಂದು ಬರುತ್ತಾನೆ ನಾಳೆ ಬರುತ್ತಾನೆ. ತಮ್ಮ ವಿದೇಶದಿಂದ ಬಂದ ಕೂಡಲೇ ಊರೆಲ್ಲಾ ಸುತ್ತಾಡಿ ಹೊಲ ಗದ್ದೆಗೆ ಹೋಗಿ ಆಟವಾಡಿ ಬರೋಣ ಎಂದುಕೊಂಡಿದ್ದ ಆ ಸಹೋದರನ ದುಃಖಕ್ಕೆ ಕೊನೆಯೇ ಇಲ್ಲದಂತಾಗಿದೆ. ಅದೆಷ್ಟೋ ಜನಪ್ರತಿನಿಧಿಗಳ ದಂಡು ಬಂದರೂ ಊರಿನ ಶೋಕ ಮಾತ್ರ ಕಡಿಮೆಯಾಗಿಲ್ಲ.

ಒಟ್ಟಿನಲ್ಲಿ ಹೊರಗೆ ಹೋದ ಮಗ ಹೊತ್ತು ಮುಳುಗುವುದರಲ್ಲಿ ಮನೆಗೆ ಬರುತ್ತಾನೆ ಎಂದುಕೊಂಡಿದ್ದ ಹೆತ್ತ ಕರುಳಿನ ನಂಬಿಕೆ ಹುಸಿಯಾಗಿದೆ. ನಮ್ಮನ್ನು ಕರೆದುಕೊಂಡು ಮಗನನ್ನು ಬದುಕಿಸು ಎಂದು ಗೋಳಾಡುತ್ತಿರುವ ಹೆತ್ತವರ ಆರ್ಥನಾದ ಆ ದೇವರಿಗೆ ಕೇಳಲೆ ಇಲ್ಲ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Nagesh Gaonkar
PublicNext

PublicNext

03/03/2022 07:59 am

Cinque Terre

35.92 K

Cinque Terre

0

ಸಂಬಂಧಿತ ಸುದ್ದಿ