ದಾವಣಗೆರೆ: ಉಕ್ರೇನ್ ನಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರಿನ ವಿದ್ಯಾರ್ಥಿನಿಯೊಬ್ಬರು ಸಂಕಷ್ಟದಲ್ಲಿ ಸಿಲುಕಿದ್ದಾರೆ
ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿಕೊಡುವ ಮೂಲಕ ಉಕ್ರೇನ್ ನಲ್ಲಿನ ಸದ್ಯದ ಪರಿಸ್ಥಿತಿಯನ್ನು ಪ್ರಿಯಾ ವಿವರಿಸಿದ್ದಾರೆ.
ಉಕ್ರೇನ್ ನ ಚರ್ನಿವಿಸ್ಟಿ ಯಲ್ಲಿ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿನಿ ಪ್ರಿಯಾ ಯುದ್ಧದ ಪರಿಸ್ಥಿತಿಯಿಂದಾಗಿ ನಮಗೆ ತುಂಬಾ ತೊಂದರೆಯಾಗಿದೆ. ಸದ್ಯ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಕಳೆದ ಎರಡು ದಿನಗಳಿಂದ ಇಲ್ಲಿ ತುಂಬಾ ಗಲಾಟೆ ನಡೆದಿತ್ತು.ಆಗಿನಿಂದ ನಾವು ಯಾರು ಹೊರಗೆ ಹೋಗಿಲ್ಲ ಎಂದು ತಿಳಿಸಿದ್ದಾರೆ.
ಭಾರತೀಯ ರಾಯಭಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. ವಾರಕ್ಕೆ ಆಗುವಷ್ಟು ಹಣ, ನೀರು ಮತ್ತು ಆಹಾರ ಸಂಗ್ರಹಣೆಗೆ ಸೂಚನೆ ನೀಡಿದ್ದರು. ಅದರಂತೆ ನಾವು ಎಲ್ಲವನ್ನು ಪಾಲಿಸಿದ್ದೇವೆ. ಇಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಈಗ ನಮ್ಮನ್ನು ಬೇರೆಡೆ ಬಸ್ ಮೂಲಕ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದ್ದಾರೆ. ತಂಡಗಳಂತೆ ಬಸ್ ಮೂಲಕ ಸ್ಥಳಾಂತರ ಮಾಡುತ್ತಿದ್ದಾರೆ. ನಾವು ಇಲ್ಲಿಂದ ಬೇರೆಡೆ ತೆರಳಲು ಸಿದ್ದರಾಗಿದ್ದೇವೆ. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ನಮ್ಮ ಕುಟುಂಬದವರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಪ್ರಿಯಾ ಸದ್ಯದ ಪರಿಸ್ಥಿತಿ ಹಂಚಿಕೊಂಡಿದ್ದಾರೆ.
PublicNext
26/02/2022 02:52 pm