ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗಳ ಮದ್ವೆಗೆ ತಮಿಳು ಕವಿ ಕೊಟ್ಟದ್ದೇನು ಗೊತ್ತೇ ?

ತಮಿಳುನಾಡು: ಅಪ್ಪ ಮಗಳ ಮದುವೆಗೆ ಭಾರಿ ತಯಾರಿ ಮಾಡಿಕೊಳ್ತಾರೆ.ವರದಕ್ಷಿಣೆ ಕೊಡಲೆಂದೇ ದುಡ್ಡು ಉಳಿಸಿಟ್ಟಿರುತ್ತಾರೆ. ಆದರೆ ಇಲ್ಲೊಬ್ಬ ತಂದೆ ಮಗಳ ಮದುವೆಗೆ ಅತ್ಯದ್ಭುತ ಸಾಹಿತ್ಯದ ಪುಸ್ತಕಗಳನ್ನೇ ವರದಕ್ಷಿಣೆ ಆಗಿ ನೀಡಿ ಈ ಪಿಡುಗಿನ ವಿರುದ್ಧ ಸಮರ ಸಾರಿದ್ದಾರೆ.

ತಮಿಳಿನ ಕವಿ ಥೇಂಗಂ ಮೂರ್ತಿನೇ ಈ ಒಂದು ವಿಶೇಷ ಕೆಲಸ ಮಾಡಿದ್ದಾರೆ. ತಮಿಳುನಾಡಿನಲ್ಲಿ ಪುದುಕ್ಕೊಟ್ಟೈನಲ್ಲಿ ನಡೆದ ಮದುವೆಯಲ್ಲಿ ಕವಿ ಮೂರ್ತಿಗಳು ಪ್ರಸಿದ್ಧ ಕವಿಗಳು ಮತ್ತು ಬರಹಗಾರರ ಕವನ ಹಾಗೂ ಉತ್ತಮ ಸಾಹಿತ್ಯದ ಪುಸ್ತಕಗಳನ್ನ ವರದಕ್ಷಿಣೆ ರೂಪದಲ್ಲಿ ನೀಡಿದ್ದಾರೆ.

ವಿಶೇಷ ಅಂದ್ರೆ ಸಾಂಪ್ರದಾಯಿಕವಾಗಿಯೇ ಅಲಂಕರಿಸಿದ 9 ಎತ್ತಿನ ಬಂಡಿಗಳಲ್ಲಿಯೇ ವರದಕ್ಷಿಣೆ ರೂಪದ ಈ ವಿಶೇಷ ಉಡುಗೊರೆಗಳು ಮದುವೆ ಮನೆಗೆ ಬಂದಿಳಿದಿವೆ.

ಈ ಮೂಲಕ ಕವಿ ಥೇಂಗಂ ವರದಕ್ಷಿಣೆ ವಿರುದ್ಧ ತಮ್ಮ ನಿಲುವನ್ನ ಹೇಳೋದರ ಜೊತೆಗೆ ಬೇರೆಯವರಿಗೂ ಮಾದರಿ ಆಗಿದ್ದಾರೆ.

Edited By :
PublicNext

PublicNext

25/02/2022 11:12 am

Cinque Terre

22.3 K

Cinque Terre

0

ಸಂಬಂಧಿತ ಸುದ್ದಿ