ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್ ಮೇಲೆ ರಷ್ಯಾ ದಾಳಿ-ಆತಂಕದಲ್ಲಿ ವಿಜಯಪುರ ಕುಟುಂಬ

ವಿಜಯಪುರ: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದೇ ತಡ.ಭಾರತದ ಷೇರು ಮಾರುಕಟ್ಟೆ ಏರುಪೇರಾಗ್ತಿದೆ. ಅದಕ್ಕೂ ಹೆಚ್ಚಾಗಿ ವಿಜಯಪುರದ ಕುಟುಂಬವೊಂದು ಆತಂಕದಲ್ಲಿಯೇ ಇದೆ. ಮಗಳ ರಕ್ಷಣೆಗಾಗಿಯೇ ಸರ್ಕಾರವನ್ನ ಪರಿಪರಿಯಾಗಿಯೇ ಮನವಿ ಮಾಡಿಕೊಳ್ಳುತ್ತಿದೆ. ಬನ್ನಿ, ಹೇಳ್ತೀವಿ.

ಹೌದು! ಈ ಪೋಷಕರು ಹೆಸರು ಮಲ್ಲನ ಗೌಡ ಕವಡಿಮಟ್ಟಿ ತಾಯಿ ಕಮಲಾ ಕವಡಿಮಟ್ಟಿ. ಉಕ್ರೇನ್ ನಲ್ಲಿ ಇವರ ಮಗಳು ಸುಚಿತ್ರಾ ಕವಡಿಮಟ್ಟಿ ಎಂಬಿಬಿಎಸ್ ಓದುತ್ತಿದ್ದಾರೆ. ಅಲ್ಲಿಯ ಸದ್ಯದ ಪರಿಸ್ಥಿತಿಯನ್ನ ತಿಳಿದಯೇ ಸುಚಿತ್ರಾ ಪೋಷಕರು ಗಾಬರಿ ಆಗಿದ್ದಾರೆ.

ಮಗಳನ್ನ ಸ್ವದೇಶಕ್ಕೆ ಕರೆತರಲು ಸರ್ಕಾರ ವ್ಯವಸ್ಥೆ ಮಾಡಬೇಕು ಅಂತಲೇ ಈಗ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಅಲ್ಲಿ ವಿಮಾನ ಸಂಚಾರ ಕೂಡ ಸ್ಥಗಿತಗೊಂಡಿದೆ. ಹೀಗಾಗಿಯೇ ದಿಕ್ಕು ತೋಚದಂತಾಗಿದೆ ಅಂತಲೇ ಸುಚಿತ್ರಾ ಪೋಷಕರು ಭಯದಲ್ಲಿದ್ದಾರೆ.

Edited By : Nagesh Gaonkar
PublicNext

PublicNext

24/02/2022 09:48 pm

Cinque Terre

48.25 K

Cinque Terre

1

ಸಂಬಂಧಿತ ಸುದ್ದಿ