ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂತ್ಯಕ್ರಿಯೆಗೆ ಅಡ್ಡಿ : ಜಿಲ್ಲಾಡಳಿತದ ಮುಂದೆ ಶವ ಇಟ್ಟು ಪ್ರತಿಭಟನೆ

ಚಿಕ್ಕಬಳ್ಳಾಪುರ : ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ಮೃತದೇಹ ತಂದ ಸಂಬಂಧಿಕರು ಪ್ರತಿಭಟನೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ರಂಗೇನಹಳ್ಳಿ ಗ್ರಾಮದ 80 ವರ್ಷದ ವೆಂಕಟಮ್ಮ ವಯೋಸಹಜ ಸಮಸ್ಯೆಯಿಂದ ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಗೆ ಗ್ರಾಮದ ಸ್ಮಶಾನದಲ್ಲಿ ನಾರಾಯಣಸ್ವಾಮಿ ಎಂಬುವವರು ಅಡ್ಡಿಪಡಿಸಿದ್ದಾರೆ.

ಗ್ರಾಮದ ನಿವೃತ್ತ ಸಮಾಜಕಲ್ಯಾಣ ಇಲಾಖಾಧಿಕಾರಿ ನಾರಾಯಣಸ್ವಾಮಿ ಸ್ಮಶಾನ ತನ್ನ ಸ್ವಂತ ಜಮೀನು ಎಂದು ಅಂತ್ಯಕ್ರಿಯೆಗೆ ಅಡ್ಡಿ ಮಾಡಿದ್ದರಿಂದ ರೋಸಿ ಹೋದ ಸಂಬಂಧಿಕರು ಜಿಲ್ಲಾಡಳಿತ ಭವನದ ಎದುರು ಶವ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪೊಲೀಸರು ಹಾಗೂ ಮೃತಳ ಸಂಬಂಧಿಕರ ನಡುವೆ ವಾಗ್ವಾದ ಸಹ ನಡೆಯಿತು.

Edited By : Nagesh Gaonkar
PublicNext

PublicNext

29/01/2022 11:00 pm

Cinque Terre

84.4 K

Cinque Terre

2