ಚಿಕ್ಕಮಗಳೂರು: ತೂಗು ಸೇತುವೇ ಇಲ್ಲದೇ ಮೃತದೇಹವನ್ನ ಸಾಗಿಸಲು ಇಲ್ಲಿಯ ಕುಟುಂಬವೊಂದು ಹೆಣಗಾಡಿದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಹೊಳೆಕೊಡಿಗೆ ಗ್ರಾಮದಲ್ಲಿ ನಡೆದಿದೆ.
ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿರೋ ಸುಬ್ರಾಯ (70) ಎಂಬುವರ ಮೃತ ದೇಹ ಸಾಗಿಸಲು ಕುಟುಂಬ ಕಷ್ಟಪಟ್ಟಿದೆ. ಓಡಾಡಲು ತೊಂದರೆ ಆಗುತ್ತದೆ. ನದಿಗೆ ತೂಗು ಸೇತುವೆ ನಿರ್ಮಿಸಿ ಅಂತ ಇಲ್ಲಿಯ ಜನ ಜನಪ್ರತಿನಿಧಿಗಳಿಗೆ ಹೇಳಿದ್ದಾರೆ. ಅಷ್ಟೇ ಯಾಕೆ ಅಧಿಕಾರಿಗಳಿಗೂ ದುಂಬಾಲು ಬಿದ್ದಿದ್ದಾರೆ. ಆದರೂ ಪ್ರಯೋಜ ಆಗಲೇ ಇಲ್ಲಿ.
ಇದರಿಂದ ಇಲ್ಲಿಯ ಮೃತ ಸುಬ್ರಾಯರ ಕುಟುಂಬ ಇವರ ದೇಹ ಸಾಗಿಸಲು ಹರಸಾಹಸ ಮಾಡಿದೆ.ತಪ್ಪದ ಮೂಲಕವೇ ನದಿಯ ಆ ದಡಕ್ಕೆ ಹೋಗಿ ಸಂಸ್ಕಾರ ಮಾಡಿದೆ.
PublicNext
22/01/2022 09:35 pm