ಮುಂಬೈ: ಚಲಿಸುತ್ತಿದ್ದ ಮಿನಿ ಬಸ್ ಚಾಲಕನಿಗೆ ಫಿಟ್ಸ್ ಬಂದ ಹಿನ್ನೆಲೆಯಲ್ಲಿ ಕೂಡಲೇ ಆತನ ನೆರವಿಗೆ ಬಂದ ಮಹಿಳೆಯೊಬ್ಬರು ಬಸ್ ಅನ್ನು 10 ಕಿ.ಮೀ ಚಾಲನೆ ಮಾಡಿ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಮಹಿಳೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಆಗಿದ್ದೇನು ಗೊತ್ತೆ?
ಮಕ್ಕಳು ಹಾಗೂ ಮಹಿಳೆಯರು ಪುಣೆ ಸಮೀಪದ ಶಿರೂರ್‌ನಲ್ಲಿ ಇರುವ ಕೃಷಿ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿ ಬಸ್‌ನಲ್ಲಿ ವಾಪಸ್ ಬರುತ್ತಿದ್ದರು. ಈ ವೇಳೆ ಚಾಲಕನಿಗೆ ಮೂರ್ಛೆ ಬಂದಿದ್ದು, ಖಾಲಿ ಇದ್ದ ರಸ್ತೆಯಲ್ಲಿ ಬಸ್ ನಿಲ್ಲಿಸಿದ್ದಾರೆ. ಜೊತೆಗೆ ತಮಗೆ ಫಿಟ್ಸ್ ಬಂದಿರುವ ಬಗ್ಗೆ ಕೈ ಸನ್ನೆಯಲ್ಲೇ ತಿಳಿಸಿದ್ದಾನೆ. ಇದರಿಂದಾಗಿ ಬಸ್‌ನಲ್ಲಿದ್ದ ಮಕ್ಕಳು ಅಳಲು ಶುರು ಮಾಡಿದ್ದಾರೆ. ಮಹಿಳೆಯರು ಕೂಡ ಕ್ಷಣಕಾಲ ಆತಂಕಕ್ಕೆ ಒಳಗಾಗಿದ್ದರು. ಅದೇ ಬಸ್ಸಿನಲ್ಲಿದ್ದ 42 ವರ್ಷದ ಯೋಗಿತಾ ಸತವ್ ಎಂಬ ಮಹಿಳೆ ಕೂಡಲೇ ಡ್ರೈವರ್ ಸೀಟಿಗೆ ಬಂದು ಬಸ್ಸನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಧೈರ್ಯದಿಂದಲೇ ಬಸ್ ಅನ್ನು ಚಾಲನೆ ಮಾಡುವ ಮೂಲಕ ನೇರವಾಗಿ ಆಸ್ಪತ್ರೆಗೆ ಬಂದಿದ್ದಾರೆ. ಬಳಿಕ ಎಲ್ಲ ಪ್ರಯಾಣಿಕರನ್ನು ತಮ್ಮ ತಮ್ಮ ಮನೆಗಳಿಗೆ ಸೇರಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
PublicNext
16/01/2022 11:01 am