ನವದೆಹಲಿ:ನಮ್ಮ ತಂದೆಯ ಸಾವು ಇಡೀ ದೇಶಕ್ಕೆ ಒಂದು ದೊಡ್ಡ ನಷ್ಟ. ನಮ್ಮ ತಂದೆ ಒಬ್ಬ ಹೀರೋ. ಅವರ ಅಗಲಿಕೆಯಿಂದ ಮತ್ತೇನೋ ಹೊಸ ಹಾದಿ ತೆರೆದುಕೊಳ್ಳುವಂತಿದೆ. ಹೀಗೆ ಹೇಳಿದ್ದು ಯಾರೂ ಗೊತ್ತೇ ? ಬನ್ನಿ, ಹೇಳ್ತಿವಿ.
ಬ್ರಿಗೆಡಿಯರ್ ಲಖ್ವಿಂದರ್ ಸಿಂಗ್ ಲಿಡ್ಡರ್ ಪುತ್ರಿ ಆಶ್ನಾ ಲಿಡ್ಡರ್ ಗೆ ಇನ್ನೂ 17 ವಯಸ್ಸು.ಈ ಹುಡುಗಿಯ ಮಾತು ಕೇಳಿದರೆ ಎಂತಹ ವ್ಯಕ್ತಿಗೂ ರೋಮಾಂಚನವಾಗುತ್ತದೆ. ವೀರ ಯೋಧನ ಮಗಳು ಅಂದ್ರೆ ಹೀಗಿರಬೇಕು ನೋಡಿ ಅಂತ ಎದೆತಟ್ಟಿ ಹೇಳಲೇಬೇಕು ಅನಿಸಿಬಿಡುತ್ತದೆ.
ಹೌದು ಆಶ್ನಾ ಲಿಡ್ಡರ್ ಮಾತುಗಳು ಹಾಗಿವೆ. ನಮ್ಮ ತಂದೆ ಒಬ್ಬ ಹೀರೋ.ಅದರಲ್ಲೂ ಇಡೀ ದೇಶದ ಹೀರೋ. ಇವರ ಸಾವಿನಿಂದ ನಮಗಷ್ಟೇ ಅಲ್ಲ. ಇಡೀ ದೇಶಕ್ಕೆ ಅತಿ ದೊಡ್ಡ ಲಾಸ್ ಆಗಿದೆ. ಇವರ ಸಾವು ನೋವು ತಂದಿದೆ ನಿಜ.ಆದರೆ ಮುಂದೇನೋ ಒಳ್ಳೆಯದೇ ಆಗುವ ಹಾಗಿದೆ ಅಂತಲೇ ಆಶ್ನಾ ಧೈರ್ಯದಿಂದ ಹೇಳಿದ್ದಾರೆ. ಅಪ್ಪನ ಅಂತ್ಯ ಕ್ರಿಯೆ ಮುಗಿಸಿದ ಬಳಿಕ ಆಶ್ನಾ ಇಷ್ಟು ಧೈರ್ಯದಿಂದಲೇ ಮಾಧ್ಯಮಕ್ಕೆ ಮಾತನಾಡಿದ್ದಾರೆ.
PublicNext
10/12/2021 06:01 pm