ಹೈದ್ರಾಬಾದ್: ಮೂರು ಅಡಿ ಎತ್ತರದ ಹೈದ್ರಾಬಾದ್‌ನ ಶಿವಲಾಲ್ ಇಡೀ ದೇಶದ ಗಮನ ಸೆಳೆದಿದ್ದಾರೆ. ತಮ್ಮ ಕುಬ್ಜ ಸಮುದಾಯದ ಹೆಸರನ್ನೂ ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹಾಗಾದ್ರೆ ಈ ಕುಬ್ಜ ವ್ಯಕ್ತಿ ಮಾಡಿದ್ದಾದರೂ ಏನು ? ಹೇಳ್ತಿವಿ ಬನ್ನಿ.
ಶಿವಲಾಲ್ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಿಂದ ಆಫೀಸ್‌ಗೆ ಹೋಗಲು ಬಸ್ಸು ಇಲ್ಲವೆ ಆಟೋ ಅವಲಂಬಿಸಲೇಬೇಕು. ಇಂತಹ ಸ್ಥಿತಿಯಲ್ಲಿ ಕುಬ್ಜ ಅನ್ನೋ ಕಾರಣಕ್ಕೆ ಕಾಮೆಂಟ್ ಮಾಡೋರು ಹೆಚ್ಚು. ಅದಕ್ಕೇನೆ ಶಿವಲಾಲ್ ಒಂದು ಐಡಿಯಾ ಮಾಡಿದ್ದರು. ಅದು ಕಾರ್ ಡ್ರೈವಿಂಗ್ ಮಾಡೋದು.
ಆದರೆ ಇಲ್ಲಿ ಅದನ್ನ ಕಲಿಸೋರು ಯಾರು.? ಆಗ ಯುಟ್ಯೂಬ್ ಅಲ್ಲಿ ಸಿಕ್ಕಿದ್ದೇ ಆ ಒಂದು ವೀಡಿಯೋ. ಆ ವೀಡಿಯೋದಲ್ಲಿ ಮತ್ತೊಬ್ಬ ಕುಬ್ಜ ಕಾರ್ ಚಲಾಯಿಸಿದ್ದ. ಅದನ್ನ ಕಂಡೇ ಶಿವಲಾಲ್ ಅಮೆರಿಕ್ಕೂ ಹೋಗಿದ್ದರು.ಅಲ್ಲಿ ಡ್ರೈವಿಂಗ್ ಕಲಿತುಕೊಂಡು ಇಂಡಿಯಾಗೂ ವಾಪಸ್ ಆಗಿದ್ದಾರೆ.
ಡ್ರೈವಿಂಗ್ ಕಲಿತಿದ್ದರೂ ಕಾರ್ ಬೇಕಲ್ಲವೇ. ಅದಕ್ಕೇನೆ ತನಗೆ ಹೇಗೆ ಬೇಕೋ ಹಾಗೆ ತನ್ನದ್ದೇ ಒಂದು ಕಾರ್ ಅನ್ನ ಬದಲಾಯಿಸಿದ್ದಾರೆ. ಅದೇ ಕಾರ್ ಬಳಸಿಕೊಂಡೇ ಈಗ ಲೈಸೆನ್ಸ್ ಕೂಡ ಪಡೆದಿದ್ದಾರೆ. ಪತ್ನಿಗೂ ಡ್ರೈವಿಂಗ್ ಕಲಿಸುತ್ತಿದ್ದಾರೆ. ಕುಬ್ಜರಿಗಾಗಿಯೇ ಒಂದು ಡ್ರೈವಿಂಗ್ ಸ್ಕೂಲ್ ತೆಗೆಯುವ ಪ್ಲಾನ್ ಕೂಡ ಮಾಡಿದ್ದಾರೆ.
PublicNext
02/12/2021 06:27 pm