ನ್ಯೂಜಿಲೆಂಡ್: ತುಂಬು ಗರ್ಭಿಣಿಯಾಗಿದ್ದ ನ್ಯೂಜಿಲೆಂಡ್ ಸಂಸದೆ ಜೂಲಿ ಅನ್ನೆ ಜೆಂಟರ್ ಹೆರಿಗೆ ನೋವು ಕಾಣಿಸಿಕೊಂಡರೂ ಕೂಡ ಸೈಕಲ್ ತುಳಿದುಕೊಂಡೇ ಆಸ್ಪತ್ರೆಗೆ ತೆರಳಿದ್ದಾರೆ. ಅಷ್ಟೇ ಅಲ್ಲ, ಅಲ್ಲಿಗೆ ಹೋಗಿ 1 ಗಂಟೆಯ ಬಳಿಕ ಮಗುವಿಗೆ ಜನ್ಮ ಕೂಡ ನೀಡಿದ್ದಾರೆ. ಇದು ಕೇಳೋಕೆ ಆಶ್ಚರ್ಯ ಅನಿಸಬಹುದು.ಆದರೆ ಇದು ಸತ್ಯ.ಬನ್ನಿ
ಇಂದು ಬೆಳಗ್ಗೆ 3.04 ರ ಸುಮಾರಿಗೆ ಜೂಲಿ ಅನ್ನೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.ಯಾವುದೋ ವಾಹನದ ವ್ಯವಸ್ಥೆ ಇರಲಿಲ್ಲವೋ ಏನೋ. ಗೊತ್ತಿಲ್ಲ. ಆದರೆ ಜೂಲಿ ಅನ್ನೆ ಜೆಂಟರ್ ತಾವೇ ಸೈಕಲ್ ತುಳಿದುಕೊಂಡು ಹೆರಿಗೆ ಆಸ್ಪತ್ರೆಗೂ ತೆರಳಿದ್ದಾರೆ.ಅಲ್ಲಿಗೆ ತುಲುಪಿ ಒಂದು ಗಂಟೆಯ ಬಳಿಕ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸೈಕಲ್ ತುಳಿದು ಕೊಂಡು ಆಸ್ಪತ್ರೆಗೆ ಹೋಗುವ ಪ್ಲಾನ್ ಇರಲಿಲ್ಲ. ಆದರೆ ಅದು ಸಂಭವಮಿಸಿದೆ ಅಂತಲೂ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
PublicNext
28/11/2021 03:19 pm