ಆಸ್ಟ್ರೇಲಿಯಾ:ದೇವರು ಇದ್ದಾನೆಯೇ ? ದೆವ್ವ ಇರುತ್ತವೆಯೇ ? ಈ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಯೇ ಇಲ್ಲ. ಅವರವರ ಭಾವಕ್ಕೆ ಅಂತ ಎಲ್ಲರೂ ಸುಮ್ಮನಾಗಿ ಬಿಟ್ಟಿದ್ದಾರೆ. ಇದರ ಮಧ್ಯೆ ನಾಯಿ ದೆವ್ವದ ವೀಡಿಯೋ ಈಗ ವೈರಲ್ ಆಗಿದೆ.ಬನ್ನಿ ಹೇಳ್ತೀವಿ.
ಸಿಸಿಟಿವಿಯ ವಿಷ್ಯೂಲ್ಸ್ ನೋಡಿದ್ರೆ ಎಲ್ಲವೂ ದೆವ್ವ ತರವೇ ಕಾಣುತ್ತದೆ. ಸಿಸಿಟಿವಿ ಮುಂದೆ ಒಂದೇ ಒಂದು ಕಿಡಿ ಹೋದರೂ ಸಾಕು. ಅದೂ ದೆವ್ವದ ರೀತಿನೇ ಕಾಣುತ್ತದೆ. ಅದೇ ರೀತಿನೇ ಇಲ್ಲೊಂದು ನಾಯಿ ಜೊತೆಗೆ ಮತ್ತೊಂದು ನಾಯಿ ಓಡಾಡಿರೋ ಸಿಸಿಟಿವಿ ವೀಡಿಯೋ ವೈರಲ್ ಆಗಿದೆ.
ಆಸ್ಟ್ರೇಲಿಯಾ ಜಾಕ್ ಡಿಮ್ಯಾಕ್ರೋ ತಮ್ಮ ನೆಚ್ಚಿನ ನಾಯಿ ಸಿಸಿಟಿವಿ ವೀಡಿಯೋವನ್ನ ಈಗ ಎಲ್ಲೆಡೆ ಶೇರ್ ಮಾಡಿದ್ದಾರೆ. ಅದರಲ್ಲಿ ತಮ್ಮ ನಾಯಿ ಜೊತೆಗೆ ಇರೋದು ನಾಯಿಯ ದೆವ್ವ (Dog Ghost) ಅಂತಲೇ ಹೇಳ್ತಿದ್ದಾರೆ.
ಆದರೆ ಈ ವೀಡಿಯೋ ನೋಡಿದ ಅನೇಕರು ಇದು ದೆವ್ವಾನೂ ಅಲ್ಲ ಏನೂ ಅಲ್ಲ. ಬಿಳಿ ನಾಯಿಯೊಂದು ನಿಮ್ಮ ನಾಯಿ ಜೊತೆಗೆ ಆಟವಾಡಿದೆ ಅಂತ ಕಾಮೆಂಟ್ ಮಾಡಿದ್ದಾರೆ. ನಾಯಿ ನಿಜವಾಗ್ಲೂ ದೆವ್ವವೇ ಆಗಿದ್ದರೇ ಅದರ ಕಣ್ಣುಗಳು ಹೊಳೆಯುತ್ತಿರಲಿಲ್ಲ. ನಿಜವಾದ ನಾಯಿ ಆಗಿರೋದ್ರಿಂದಲೇ ಲೈಟ್ ಬೆಳಕಿಗೆ ಆ ಬಿಳಿ ನಾಯಿಯ ಕಣ್ಣು ಹೊಳೆಯುತ್ತಿವೆ ಅಂತಲೂ ಇನ್ನೂ ಕೆಲವರು ಕಾಮೆಂಟ್ ಕೊಟ್ಟಿದ್ದಾರೆ. ಆದರು ಈ ವೀಡಿಯೋ (Dog Ghost) ಅಂತಲೇ ವೈರಲ್ ಆಗುತ್ತಿದೆ.
PublicNext
24/11/2021 10:07 pm