ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ನಿ ಗತಿಸಿದ ಮೇಲೆ ಹುಚ್ಚನಂತಾಗಿದ್ದ ವ್ಯಕ್ತಿ ಈಗ ಟೈಲರ್

ಬೆಂಗಳೂರು: ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದವನ ಬಾಳಿಗೆ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಬೆಳಕಾಗಿದ್ದಾರೆ. ಸಂಪೂರ್ಣ ಹೊಸಜೀವನ ರೂಪಿಸಿಕೊಂಡಿರುವ ಆ ವ್ಯಕ್ತಿ ಈಗ ಟೈಲರ್ ವೃತ್ತಿ ಆರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಕೆದರಿದ ತಲೆ, ಮಾಸಿದ ಅಂಗಿ ಧರಿಸಿರುವ ಇವರ ಹೆಸರು ಶಂಕರ್. ಪಾವಗಡ ಮೂಲದ ಶಂಕರ್ ವೃತ್ತಿಯಲ್ಲಿ ಟೈಲರ್. ಎರಡು ವರ್ಷಗಳ ಹಿಂದೆ ಇವರ ಪತ್ನಿ ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ನಿಧನರಾಗಿದ್ದರು. ಪತ್ನಿ ಸಾವಿನ ನೋವು ಮರೆಯಲಾಗದ ಪತಿ ಶಂಕರ್ ಮಾನಸಿಕ ಖಿನ್ನತೆಗೆ ಒಳಗಾಗಿ ಭಿಕ್ಷೆ ಬೇಡುತ್ತ ಬೆಂಗಳೂರಿನ ಬೀದಿಯಲ್ಲಿ ಅಲೆಯುತ್ತಿದ್ದರು. ಇದನ್ನು ಗಮನಿಸಿದ ಮಡಿವಾಳ ಸಂಚಾರಿ ಇನ್ಸ್ಪೆಕ್ಟರ್ ಶಿವರಾಜ್, ಶಂಕರ್ ಅವರನ್ನು ಕರೆಸಿ ಆಪ್ತ ಸಮಾಲೋಚನೆ ಮಾಡಿದ್ದಾರೆ. ಪತ್ನಿ ಸಾವಿನ ನೋವಿನಿಂದ ಹೊರಬರುವಂತೆ ಬುದ್ಧಿ ಮಾತು ಹೇಳಿದ್ದಾರೆ. ಶಂಕರ್ ಅವರಿಗೆ ಕವಿತ ಬರೆಯುವ ಹವ್ಯಾಸ ಇತ್ತಂತೆ. ಶಂಕರ್ ಅವರು ಬರೆದ ಕವಿತೆಗಳನ್ನು ಓದಿದ ಇನ್ಸ್ಪೆಕ್ಟರ್ ಶಿವರಾಜ್ ಅಂಗಡಿ ಅಚ್ಚರಿಗೊಂಡಿದ್ದಾರೆ.

ಸದ್ಯ ಇನ್ಸ್ಪೆಕ್ಟರ್ ಮಾತಿನಂತೆ ಪತ್ನಿಯ ಸಾವಿನ ನೋವು ಮರೆತು ಶಂಕರ್ ಅವರು ಹೊಸ ಜೀವನ ಆರಂಭಿಸಿದ್ದಾರೆ. ಮತ್ತು ಟೈಲರ್ ವೃತ್ತಿಯನ್ನು ಮತ್ತೆ ಶುರು ಹಚ್ಚಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣವಾದ ಇನ್ಸ್ಪೆಕ್ಟರ್ ಶಿವರಾಜ್ ಅವರ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.

Edited By : Shivu K
PublicNext

PublicNext

14/11/2021 08:23 pm

Cinque Terre

88.72 K

Cinque Terre

22

ಸಂಬಂಧಿತ ಸುದ್ದಿ