ವಾಷಿಂಗ್ಟನ್: ಮಾನವನಿಗೂ ಹಂದಿಗೂ ಎಲ್ಲಿಂದ ಎಲ್ಲಿ ಲಿಂಕ್.ಆದರೆ, ಮೆದುಳು ನಿಷ್ಕ್ರಿಯವಾದ ಮಹಿಳೆಗೆ ಈಗ ಹಂದಿಯ ಕಿಡ್ನಿ ಕಸಿ ಮಾಡಲಾಗಿದೆ. ಇಲ್ಲಿಯ ನ್ಯೂಯಾರ್ಕ್ ನ ಲಾಂಗ್ ಒನ್ ಹೆಲ್ತ್ ಸಂಸ್ಥೆಯ ವೈದ್ಯರು ಈ ಪ್ರಯೋಗ ಮಾಡಿ ಸಕ್ಸಸ್ ಕಂಡಿದ್ದಾರೆ.
ಇಲ್ಲಿಯ ಮಹಿಳೆಯೊಬ್ಬರ ಮೆದುಳು ನಿಷ್ಕ್ರಿಯವಾಗಿತ್ತು.ಮಹಿಳೆಯ ಮನೆಯವರ ಪರವಾನಗಿ ಪಡೆದೇ ವೈದ್ಯರು
ಈ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆದರೆ, ಮಹಿಳೆಗೆ ಅಳವಡಿಸಿದ ಕಿಡ್ನಿ ವಂಶವಾಹಿ ಪರಿವರ್ತಿಸಲಾದ ಹಂದಿಯ ಕಿಡ್ನಿನೇ ಆಗಿದೆ. ಇದರಿಂದ ಮನುಷ್ಯನಿಗೆ ಹಂದಿ ಕಿಡ್ನಿ ಅಳವಡಿಸಿದರೇ ತೊಂದರೆ ಆಗೋದಿಲ್ಲ ಅನ್ನೋದು ತಿಳಿದು ಬಂದಿದೆ ಅಂತಲೇ ಡಾಕ್ಟರ್ ಹೇಳಿದ್ದಾರೆ. ಆದರೆ, ಮೆದುಳು ಕೆಲಸ ಮಾಡುವ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿರೋರಿಗೆ ಇದನ್ನ ಅಳವಡಿಸಿದರೇ ವರ್ಕ್ ಆಗುತ್ತಾ ಅನ್ನೋ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
PublicNext
23/10/2021 08:01 am