ನವದೆಹಲಿ: ನಿಜವಾದ ಪ್ರೀತಿಗೆ ಎಲ್ಲವನ್ನು ಗೆಲ್ಲುವ ಸಾಮರ್ಥ್ಯವಿದೆ ಎಂಬುದನ್ನು ಯುವಕನೋರ್ವ ಸಾಬೀತು ಮಾಡಿದ್ದಾನೆ. ಇದು ಕಣ್ಣಂಚಲಿ ನೀರು ತುಂಬಿಸುವ ಪ್ರೇಮ ಕತೆ ಇದಾಗಿದೆ.
ಸುಮಾರು ಒಂದೂವರೆ ತಿಂಗಳಿಂದ ಕೋಮಾಗೆ ಜಾರಿದ್ದ ಪ್ರೇಯಸಿ, ಯಾವಾಗ ಕೋಮಾದಿಂದ ಹೊರ ಬರುತ್ತಾಳೆ ಎಂದು ಯುವಕ ಕಾದು ಕುಳಿತಿದ್ದ. ಕೋಮಾದಿಂದ ಮತ್ತೆ ಜೀವನಕ್ಕೆ ಮರಳಿದ ತನ್ನ ಪ್ರೇಯಿಸಿ ಅಗಾಧವಾದ ಪ್ರೀತಿಯನ್ನು ತೋರಿದ ಪ್ರಿಯಕರ, ಆಕೆಗೆ ರಿಂಗ್ ತೊಡಿಸಿ, ನೀನು ನನ್ನ ಮದುವೆ ಆಗಲು ಬಯಸುವೆಯಾ ಎಂದು ಪ್ರಶ್ನಿಸಿದಾಗಲೇ ಆಕೆಯ ಕಣ್ತುಂಬಿತು.
ಈ ಘಟನೆ ನಡೆದಿರುವುದು ಅಮೆರಿಕದ ಚಿಕಾಗೋದಲ್ಲಿರುವ ಫಿಲಿಫೈನ್ಸ್ನಲ್ಲಿ. ಯುವತಿ ಹೆಸರು ವಿಕ್ಟೋರಿಯಾ. ವಿಕ್ಟೊರಿಯಾ ಬಾಯ್ಫ್ರೆಂಡ್ ಸ್ಟೀವನ್ ಸುಮಾರು ಒಂದು ವರ್ಷದಿಂದಲೂ ಪರಿಚಯವಿದ್ದ. ವಿಕ್ಟೊರಿಯಾಳನ್ನು ತುಂಬಾ ಪ್ರೀತಿಸುತ್ತಿದ್ದ. ಆದರೆ ಆಕೆಗೆ 2016ರಿಂದ ಲಪಸ್ ಸಿಂಡ್ರೋಮ್ನಿಂದ ಬಳಲುತ್ತಿದ್ದಳು. ಅಲ್ಲದೆ ವಿರಳಾತಿ ವಿರಳ ಜಾನ್ಸನ್ ಸಿಂಡ್ರೋಮ್ ಹೆಸರಿನ ಅಪಾಯಕಾರಿ ಚರ್ಮ ಕ್ಯಾನ್ಸರ್ಗೆ ಒಳಗಾಗಿದ್ದಳು. ಎರಡು ಕಾಯಿಲೆ ಒಟ್ಟಿಗೆ ದಾಳಿ ಮಾಡಿದ್ದರಿಂದ ಚಿಕಿತ್ಸೆಯಿಲ್ಲದೇ ಆಕೆ ಒಂದೂವರೆ ತಿಂಗಳು ಕೋಮಾಗೆ ಜಾರಿದ್ದಳು. ಇದು ಸ್ಟೀವನ್ಗೆ ಬರಸಿಡಿಲು ಬಡಿದಂತಾಯಿತು. ಆಕೆಯನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದ ಆತ ಆಕೆ ಖಂಡಿತ ಕೋಮಾದಿಂದ ಬಂದೇ ಬರುತ್ತಾಳೆ ಎಂದು ನಂಬಿದ್ದ.
ಒಂದೂವರೆ ತಿಂಗಳಲ್ಲೇ ವಿಕ್ಟೋರಿಯಾ ಕೋಮಾದಿಂದ ಹೊರಬಂದಿದ್ದಾಳೆ. ಅಂದುಕೊಂಡಂತೆ ಪ್ರೇಯಸಿ ಸಾವನ್ನೇ ಗೆದ್ದು ಬಂದಿರುವುದು ಸ್ಟೀವನ್ಗೆ ತುಂಬಾ ಖುಷಿಯಾಗಿದ್ದು, ತಕ್ಷಣವೇ ಆಕೆಗೆ ಪ್ರೇಮ ನಿವೇದನೆಯನ್ನು ಮಾಡಿ, ರಿಂಗ್ ಕೂಡ ತೊಡಿಸಿದ್ದಾನೆ. ವಿಕ್ಟೋರಿಯಾ ಕಣ್ಣಲ್ಲೂ ಭಾವುಕತೆ ತುಂಬಿದ್ದು, ಇಂತಹ ಜೀವನ ಸಂಗಾತಿಗಿಂತ ಹೆಚ್ಚಿನದ್ದನ್ನು ಇನ್ನೇನು ಪಡೆಯಲು ಸಾಧ್ಯ ಎಂಬ ಮನದಾಳವನ್ನು ಹೊರ ಹಾಕಿದ್ದಾಳೆ.
ಕೋಮಾದಿಂದ ಹೊರಬಂದು ಸುಮಾರು 7 ತಿಂಗಳ ಚೇತರಿಕೆ ಬಳಿಕ ವಿಕ್ಟೋರಿಯಾ ಡಿಸ್ಚಾರ್ಜ್ ಆಗಿದ್ದಾಳೆ. ಇದೀಗ ಆಕೆಯ ಮನೆಯಲ್ಲಿ ಮದುವೆಗೆ ಸಿದ್ಧತೆಗಳು ನಡೆದಿದ್ದು, ಇಬ್ಬರು ಹೊಸ ಬಾಳಿನ ಪಯಣವನ್ನು ಆರಂಭಿಸಲು ಸಜ್ಜಾಗಿದ್ದಾರೆ.
PublicNext
22/08/2021 11:05 pm