ವಿಜಯಪುರ: ಜನ ಇನ್ನು ಮಾನವೀಯತೆ ಮೆರೆತ್ತಿಲ್ಲ. ಎನ್ನುವುದಕ್ಕೆ ಈ ವ್ಯಕ್ತಿ ಸಾಕ್ಷಿಯಾಗಿದ್ದಾರೆ.ತಂದೆ, ತಾಯಿ, ಅಜ್ಜಿ ಎಲ್ಲರನ್ನೂ ಕಳೆದುಕೊಂಡು ಅನಾಥಳಾಗಿದ್ದ ಹಿಂದೂ ಹುಡುಗಿ ಇಕೆಯನ್ನು ಮಗಳಂತೆ ಸಾಕಿದ ಮುಸ್ಲಿಂ ವ್ಯಕ್ತಿ ಇದೀಗ ಆಕೆಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿಸಿಕೊಟ್ಟು ಕೋಮು ಸೌಹಾರ್ದ ಮೆರೆದ ಘಟನೆ ವಿಜಯಪುರದಲ್ಲಿ ನಡೆದಿದೆ.
ಪತ್ನಿ ಹಾಗೂ ನಾಲ್ವರು ಮಕ್ಕಳ ಜತೆಗೆ ತನ್ನವರೆಲ್ಲರನ್ನು ಕಳೆದುಕೊಂಡು ದಿಕ್ಕಿಲ್ಲದೇ ಅನಾಥಳಾಗಿದ್ದ ಯುವತಿಗೆ ಆಶ್ರಯ ನೀಡಿದ ಮೆಹಬೂಬ್ ಮಸಳಿ ಸ್ವಂತ ಮಗಳಂತೆ ಸಾಕಿ ಸಲುಹಿದ್ದಾರೆ. ಪೂಜಾ ಒಡಗೇರಿ (20 ವರ್ಷ) ಎಂಬಾಕೆಗೆ ನಿನ್ನೆ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿಸಿದ ಮೆಹಬೂಬ್ ಮಸಳಿ, ಆಕೆಯ ಸಮುದಾಯಕ್ಕೆ ಸೇರಿದ ಯುವಕನೊಂದಿಗೆ ವಿವಾಹ ಮಾಡಿಕೊಟ್ಟಿದ್ದಾರೆ.
ಬಸವನಬಾಗೇವಾಡಿ ತಾಲೂಕಿನ ಸಾರವಾಡ ಗ್ರಾಮದ ಶಂಕರಪ್ಪ ಕುಂದರವಾಲೆಯೊಂದಿಗೆ ಪೂಜಾ ಒಡಗೇರಿಗೆ ವಿವಾಹ ಮಾಡಲಾಗಿದ್ದು, ಹಿಂದೂ ಬಾಲಕಿಯನ್ನು ಪೋಷಿಸಿ, ವಿವಾಹ ಮಾಡುವ ಮೂಲಕ ಮೆಹಬೂಬ್ ಭಾವೈಕ್ಯತೆ ಮೆರೆದಿದ್ದಾರೆ. ಮೆಹಬೂಬ್ ಮಸಳಿ ಹಾಗೂ ಕುಟುಂಬದ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
PublicNext
31/07/2021 04:03 pm