ತಿರುವನಂತಪುರಂ: ನನ್ನ ಮದುವೆ ಧಾಂ ಧೂಂ ಅಂತ ಆಗಬೇಕು. ಸಿರಿ ಸಿಂಗಾರ ಇರಬೇಕು. ಸಾವಿರಾರು ಮಂದಿ ಅಲ್ಲಿ ಸೇರಿರಬೇಕು. ಹೀಗೆ ವಧು- ವರರು ಏನೇನೋ ಆಸೆ-ಕನಸು ಕಂಡಿರುತ್ತಾರೆ. ಆದ್ರೆ ಈ ವರನ ಪಾಲಿಗೆ ಅದೆಲ್ಲ ಇದ್ದರೂ ಇಲ್ಲದಂತಾಗಿದೆ.
ಕೇರಳದ ವೆಂಬಾಯಮ್ ನಲ್ಲಿ ವರ ಮನೋಜ್ ಹಾಗೂ ವಧು ರೇವತಿ ನಡುವೆ ಮದುವೆ ಸೆಟ್ಟಾಗಿದೆ. ಇದೇ ಸಮಯದಲ್ಲಿ ವರ ಮನೋಜ್ ಅವರ ಆರೋಗ್ಯ ಕೈ ಕೊಟ್ಟದೆ. ವೈದ್ಯರಿಗೆ ತೋರಿಸಲಾಗಿ ಇವರಿಗೆ ತುರ್ತು ಚಿಕಿತ್ಸೆಯ ಅಗತ್ಯ ಇದೆ ಎಂದಿದ್ದಾರೆ. ಹೀಗಾಗಿ ಮನೋಜ್ ಅವರು ಆಸ್ಪತ್ರೆಗೆ ದಾಖಲಾಗಬೇಕಾದದ್ದು ಅನಿವಾರ್ಯವಾಗಿದೆ. ಕಾರಣ, ಫೆಬ್ರುವರಿ 4ರಂದು ಅಂದುಕೊಂಡಂತೆ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ ಮುಂದೂಡಿತು. ಈ ನಡುವೆ ಎರಡೂ ಕುಟುಂಬಸ್ಥರು ವರ ಮನೋಜ್ ಅವರು ದಾಖಲಾಗಿರುವ ಆಸ್ಪತ್ರೆಯಲ್ಲೇ ಮದುವೆ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಫೆಬ್ರುವರಿ 6ರಂದು ರೇವತಿ ಹಾಗೂ ಮನೋಜ್ ವಿವಾಹ ಆಸ್ಪತ್ರೆಯಲ್ಲೇ ನಡೆದಿದೆ.
ಈ ಸರಳ ವಿವಾಹದ ಸಂಭ್ರಮದಲ್ಲಿ ಭಾಗಿಯಾದ ಆಸ್ಪತ್ರೆಯ ಸಿಬ್ಬಂದಿ ನೂತನ ಜೋಡಿಗೆ ಖುಷಿಯಿಂದ ಹರಸಿ ಹಾರೈಸಿದ್ದಾರೆ.
PublicNext
09/02/2021 09:52 am