ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಧಾರವಾಡದ ಸಾವಿನ ಹೆದ್ದಾರಿ: ಮೃತರ ಸಂಬಂಧಿಕರು, ಕುಟುಂಬದವರು ಹೋರಾಟಕ್ಕಿಳಿದಿದ್ದು ಯಾಕೆ ಗೊತ್ತಾ...?

ದಾವಣಗೆರೆ: ದಾವಣಗೆರೆಯ ಹತ್ತು ಕುಟುಂಬಗಳ ನಂದಾದೀಪ ಆರಿಸಿದ ಹಾಗೂ ಸಂಕ್ರಮಣವನ್ನು ಕತ್ತಲಾಗಿಸಿರುವ ಧಾರವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದ ಕ್ರಮ ಖಂಡಿಸಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.‌

ಕಳೆದ ಜನವರಿ 15 ರಂದು ಧಾರವಾಡದ ಇಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಾವಣಗೆರೆಯ 13 ಜನ ಗೆಳತಿಯರು ಮೃತಪಟ್ಟಿದ್ದಾರೆ. ಈ ಭೀಭತ್ಸ ಘಟನೆ ಬಳಿಕ ಮೃತ ಮಹಿಳೆಯರ ದಾರುಣ ಅಂತ್ಯವು ಇನ್ನು ಅವರ ಕುಟುಂಬಸ್ಥರನ್ನು ಕಾಡುತ್ತಿದೆ.

ಘಟನೆಗೆ ಕಾರಣವಾದ, ಹೆದ್ದಾರಿ ಪೂರ್ಣಗೊಳಿಸದ ಅಧಿಕಾರಿಗಳು ಹಾಗೂ ನಿರ್ಲಕ್ಷ್ಯ ವಹಿಸಿದ ಕೇಂದ್ರ ಸರ್ಕಾರದ ವಿರುದ್ಧ ಇದೀಗ ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರು ಹೋರಾಟಕ್ಕೆ ಮುಂದಾಗಿದ್ದಾರೆ.

ಇದೇ ಫೆಬ್ರವರಿ 6 ರಂದು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಜನತೆಗೆ ತಿಳಿಸುವ ಸಂಬಂಧ ದಾವಣಗೆರೆಯ ಐಎಂಎ ಹಾಲ್ ನಿಂದ ಅಪಘಾತ ಸ್ಥಳದವರೆಗೆ ಜಾಥಾ ನಡೆಸಲು ನಿರ್ಧರಿಸಿದ್ದಾರೆ.

ಅಂದು ಬೆಳಿಗ್ಗೆ 7 ಘಂಟೆಗೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಜಾಥಾ ಆರಂಭವಾಗಲಿದೆ. ಈ ಜಾಥಾಕ್ಕೆ ದಾವಣಗೆರೆ- ಹುಬ್ಬಳ್ಳಿ ಧಾರವಾಡ ನಾಗರಿಕ ಸುರಕ್ಷತಾ ವೇದಿಕೆ ಕೂಡ ಸಾಥ್ ನೀಡಿದ್ದು, ಮೃತ ಮಹಿಳೆ ಪತಿ ಡಾ. ರವಿಕುಮಾರ್, ಡಾ.ರಮೇಶ್, ಉದ್ಯಮಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಜಾಥಾ ನಡೆಯಲಿದೆ.

ಆಕ್ಸಿಡೆಂಟ್ ಸ್ಫಾಟ್ ಗೆ ತೆರಳಿ ಭಾರೀ ಪ್ರತಿಭಟನೆ‌ ನಡೆಯಲಿದೆ. ಸರ್ಕಾರದ ವೈಫಲ್ಯಗಳನ್ನು ಜಗತ್ತಿಗೆ ತೆರೆದಿಡುವ ಹಾಗೂ ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಸಂಭವಿಸದಂತೆ ಜಾಗೃತಿ ಮೂಡಿಸುವುದು ಈ ಜಾಥಾದ ಮುಖ್ಯ ಉದ್ದೇಶವಾಗಿದೆ.

Edited By : Manjunath H D
PublicNext

PublicNext

04/02/2021 07:21 pm

Cinque Terre

126.92 K

Cinque Terre

19

ಸಂಬಂಧಿತ ಸುದ್ದಿ