ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಕುಟುಂಬದ ಜತೆ ಸಮಯ ಕಳೆಯಲು ನಿವೃತ್ತಿ ಪಡೆದು ಬಂದ ಮರುದಿನವೇ ಯೋಧ ಸಾವು

ಕೋಲಾರ: ಕುಟುಂಬದ ಜತೆ ಸಮಯ ಕಳೆಯುವ ಕನಸು ಹೊತ್ತು ಸೇನೆಯಿಂದ ನಿವೃತ್ತಿ ಪಡೆದು ಗ್ರಾಮಕ್ಕೆ ಬಂದ ಮರುದಿನವೇ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ.

ಬೂದಿಕೋಟೆ ಬಳಿಯ ಕೊಡಗುರ್ಕಿ ಗ್ರಾಮದ ನಿವಾಸಿ ಮಂಜುನಾಥ್ ಮೃತ ಯೋಧ. ಮಂಜುನಾಥ್‌ ಅವರು ದೇಶದ ಗಡಿಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಜನವರಿ 31 ರಂದು ಅಂದ್ರೆ ಒಂದು ದಿನದ ಮುಂಚೆ ನಿವೃತ್ತಿಯಾಗಿದ್ದರು. ದೇಶದ ಸೇವೆ ಮುಗಿಸಿ ನಿವೃತ್ತಿಯಾಗಿ ಊರಿಗೆ ಬಂದವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿತ್ತು. ಆದರೆ ಮರುದಿನ ಇವರ ನೆನೆಪು ಮಾತ್ರ ಉಳಿಯುವಂತಾಗಿದೆ.

ಕೋಲಾರ ನಗರದ ಅಂಬೇಡ್ಕರ್ ನಗರದಲ್ಲಿ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಮಂಜುನಾಥ್ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ. ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ವೀರಯೋಧ ಮಂಜುನಾಥ್ ಅವರು ಇಬ್ಬರು ಮಕ್ಕಳು, ಪತ್ನಿ, ಕುಟುಂಬ ಮತ್ತು ಅಪಾರ ಸ್ನೇಹಿತರನ್ನ ಅಗಲಿದ್ದಾರೆ.

Edited By : Vijay Kumar
PublicNext

PublicNext

03/02/2021 10:28 am

Cinque Terre

92.32 K

Cinque Terre

43