ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊದಲ ಹೆರಿಗೆಯಲ್ಲೇ 4 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

ಪೆರಿಂಥಲ್ ಮನ್ನ (ಮಲಪ್ಪುರಂ) : ಮೊದಲ ಹೆರಿಗೆಯಲ್ಲಿಯೇ ಮಹಿಳೆಯೊಬ್ಬಳು ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಪಲಕ್ಕಾಡ್ ನ ಛಲಾವರ ಮೂಲದ ದಂಪತಿ ಮುಸ್ತಾಫ ಮತ್ತು ಮುಬೀನಾ ಸಂತಸದಿಂದಲೇ ವಂಶೋದ್ಧಾರಕರನ್ನು ಬರಮಾಡಿಕೊಂಡಿದ್ದಾರೆ.

ಕಳೆದ ವರ್ಷ ಮದುವೆಯಾಗಿದ್ದ ಮುಬೀನಾ ಗರ್ಭಾವಸ್ಥೆಯ ಆರಂಭದಲ್ಲೇ ನಾಲ್ಕು ಮಕ್ಕಳ ತಾಯಿ ಆಗಲಿದ್ದಾರೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಪೆರಿಂಥಲ್ ಮನ್ನದ ಮೌಲಾನಾ ಆಸ್ಪತ್ರೆಯ ಸ್ತ್ರೀರೋಗತಜ್ಞರಾದ ಡಾ. ಅಬ್ದುಲ್ ವಾಹಾಬ್ ಅವರ ಬಳಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು.

ಗರ್ಭಾವತಿಯಾಗಿ 8 ತಿಂಗಳು ಕಳೆದ ಬಳಿಕ ಸಿ-ಸೆಕ್ಷನ್ ಸರ್ಜರಿ ಮೂಲಕ ನಾಲ್ಕು ಮಕ್ಕಳಿಗೆ ಮಬೀನಾ ಜನ್ಮ ನೀಡಿದ್ದಾರೆ. ಪ್ರತಿ ಮಗು 1100 ರಿಂದ 1600 ಗ್ರಾಂ ತೂಗುತ್ತಿದ್ದೆ. ಸದ್ಯ ಮಕ್ಕಳಿಗೆ ನಿಯೋ ಬ್ಲೆಸ್ ವಿಭಾಗದಲ್ಲಿ ವಿಶೇಷ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಎಲ್ಲ ಮಕ್ಕಳು ಸಹ ಆರೋಗ್ಯವಾಗಿದ್ದಾರೆಂದು ನಿಯೋ ಬ್ಲೆಸ್ ವಿಭಾಗದ ಉಸ್ತುವಾರಿ ಡಾ. ಜಯಚಂದ್ರ ಅವರು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

27/01/2021 01:34 pm

Cinque Terre

66.72 K

Cinque Terre

9

ಸಂಬಂಧಿತ ಸುದ್ದಿ