ಕಲಬುರಗಿ : ಪೊಲೀಸರು ಎಂದ್ರೆ ಮೂಗು ಮುರಿಯುವವರೆ ಆದ್ರೆ ಕೆಲ ಪೊಲೀಸರು ತಮ್ಮ ಜೀವದ ಹಂಗು ತೊರೆದು ಮಾಡುವ ಕೆಲವು ಕಾರ್ಯಗಳು ಮತ್ತೊಬ್ಬರ ಬದುಕಿನ ದಾರಿಯನ್ನೇ ಬದಲಿಸುತ್ತವೆ.
ಹೌದು ಇಲ್ಲೊಬ್ಬ ಪೊಲೀಸ್ ಪೇದೆಯ ಸಮಯ ಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವೃದ್ಧೆಯ ಪ್ರಾಣ ರಕ್ಷಣೆ ಮಾಡಿರುವ ಘಟನೆ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿಯ ಬ್ರಿಡ್ಜ್ ಬಳಿ ನಡೆದಿದೆ. ಸದ್ಯ ಅಜ್ಜಿ ರಕ್ಷಣೆಯ ಆ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಜೇವರ್ಗಿ ಠಾಣೆಯ ಪೊಲೀಸ ಪೇದೆ ಅನೀಲ್ ಕುಮಾರ್ ಎಂಬುವರು ಸಮಯಪ್ರಜ್ಞೆ ಮೆರೆದು ಜಾಣ್ಮೆ ಯಿಂದ ಅಜ್ಜಿಯ ಮನ ವೊಲಿಸಿ ಆಕೆಯ ಪ್ರಾಣ ರಕ್ಷಣೆ ಮಾಡಿದ್ದಾರೆ.
ಮೂಲತಃ ಆಳಂದ ನಿವಾಸಿ ಗುರುಬಾಯಿ ಮಾಲಗಾರ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
2021 ರ ಹೊಸ ವರ್ಷ ದಿನದ ರಾತ್ರಿ ಅಜ್ಜಿ ಗುರುಬಾಯಿ, ಕಟ್ಟಿಸಂಗಾವಿ ಭೀಮಾ ನದಿಯ ಬ್ರಿಡ್ಜ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು ಆ ವೇಳೆ ಅದೇ ರಸ್ತೆಯಲ್ಲಿ ಗಸ್ತಿಗೆ ತೆರಳುತ್ತಿದ್ದ ಅನೀಲ್ ಕುಮಾರ್ ಈ ದೃಶ್ಯವನ್ನು ಗಮನಿಸಿ ತಕ್ಷಣ ಸಮಯ ಪ್ರಜ್ಞೆ ತೋರಿದ್ದಾರೆ.
ಅಜ್ಜಿಯನ್ನು ಮಾತಿಗೆಳೆದು ಜಾಣ್ಮೆಯಿಂದ ಆಕೆಯ ಬಳಿ ಹೋಗಿದ್ದಾರೆ. ತಮ್ಮ ಸಹೋದ್ಯೋಗಿ ವಿಜಯ್ ಕುಮಾರ್ ಹಾಗೂ ಸ್ಥಳೀಯರ ಸಹಾಯದಿಂದ ಅಜ್ಜಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಜೇವರ್ಗಿಗೆ ಕರೆದೊಯ್ದಿದ್ದಾರೆ.
PublicNext
03/01/2021 02:29 pm