ಬೆಂಗಳೂರು: ನಾವು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು, ಇಲ್ಲೇ ತಿಂದುಂಡು, ಇಲ್ಲಿರುವ ಎಲ್ಲವನ್ನೂ ಅನುಭವಿಸಿ ಕೆಲವೊಮ್ಮೆ ಕನ್ನಡ ಮಾತಾಡಲು ಹಿಂಜರಿಯುತ್ತೇವೆ. ದೊಡ್ಡವರು, ದೊಡ್ಡ ಉದ್ಯಮಿಗಳು ಬಂದಾಗ ಕನ್ನಡ ಮಾತಾಡಲು ನಮಗೆ ತಿಳಿಯದಂತೆ ನಮ್ಮೊಳಗೆ ಹಿಂಜರಿಕೆ ಬಂದು ಬಿಡುತ್ತೆ.
ಇದಕ್ಕೆ ಅಪವಾದ ಎಂಬಂತೆ ಇಬ್ಬರು ವಿದೇಶಿಗರು ಕನ್ನಡ ಕಲಿಯುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ತಾಯ್ನೆಲದ ಭಾಷೆ ಬಗ್ಗೆ ಅಪಾರ ಒಲವು ಹೊಂದಿರುವ ಕನ್ನಡಿಗರು ಈ ವಿಡಿಯೋವನ್ನು ಸಿಕ್ಕಾಪಟ್ಟೆ ಶೇರ್ ಮಾಡ್ತಿದ್ದಾರೆ.
ಜರ್ಮನ್ ಕಾನ್ಸುಲೇಟ್ ಜನರಲ್ ಅಗಿರುವ ಆಚಿಮ್ ಬರ್ಕರ್ಟ್ ಅವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವಿಡಿಯೋ ಕನ್ನಡಿಗರ ಕಣ್ಣಿಗೆ ಬಿದ್ದು ವೈರಲ್ ಆಗಿದೆ. ಆಚಿಮ್ ಅವರ ಸಹೋದ್ಯೋಗಿಗಳು ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್‌ಗೆ ತೆರಳಿ ಅಲ್ಲಿನ ಮಾಣಿಯೊಂದಿಗೆ ಕನ್ನಡದಲ್ಲೇ ವ್ಯವಹರಿಸಿದ್ದಾರೆ. ವಿದೇಶಿ ಪ್ರಜೆಗಳು ಇಷ್ಟು ಸ್ವಚ್ಛ ಹಾಗೂ ಸ್ಪಷ್ಟ ಕನ್ನಡ ಮಾತಾಡಿದ್ದನ್ನು ಕಂಡ ಹೋಟೆಲ್ ಸಿಬ್ಬಂದಿ ಪುಳಕಿತರಾಗಿದ್ದಾರೆ.
PublicNext
21/08/2022 10:05 pm