ಭೋಪಾಲ್(ಮಧ್ಯ ಪ್ರದೇಶ): ಸರ್ ನೀವು ರಜೆ ಕೊಡದೇ ಇದ್ದಲ್ಲಿ ನನ್ನ ಹೆಂಡತಿ ಬೈತಾಳೆ. ದಯವಿಟ್ಟು ರಜೆ ಕೊಡಿ ಸರ್..
ಹೀಗಂತಾ ಮಧ್ಯಪ್ರದೇಶದ ಬೋಪಾಲ್ ನಗರದ ಪೊಲೀಸ್ ಪೇದೆಯೊಬ್ಬರು ತಮ್ಮ ಮೇಲಧಿಕಾರಿಗೆ ರಜೆ ಪತ್ರ ಬರೆದಿದ್ದಾರೆ. ಈ ಪರಿಣಾಮ ಪೇದೆ ಈಗ ಇಲಾಖೆಯ ಶಿಸ್ತುಕ್ರಮ ಎದುರಿಸುವಂತಾಗಿದೆ.
ರಜೆಗಾಗಿ ಡಿಐಜಿ ಗೆ ಪತ್ರ ಬರೆದ ಪೊಲೀಸ್ ಪೇದೆ ಡಿಸೆಂಬರ್ 11ಕ್ಕೆ ನನ್ನ ಸೋದರಳಿಯನ ಮದುವೆ ಇದೆ. ಮದುವೆಗೆ ನೀವು ರಜೆ ಪಡೆದು ಬರಲೇಬೇಕು. ಇಲ್ಲದಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ನನ್ನ ಹೆಂಡತಿ ಎಚ್ಚರಿಕೆ ನೀಡಿದ್ದಾಳೆ. ಹೀಗಾಗಿ ದಯವಿಟ್ಟು ತಾವು ರಜೆ ಕೊಡಬೇಕು ಎಂದು ಬರೆದಿದ್ದಾರೆ.
ಈ ಪತ್ರವನ್ನ ಶೇರ್ ಮಾಡಿರುವ ಡಿಐಜಿ , ರಜೆ ಪಡೆಯಲು ಇಲಾಖೆ ಸಿಬ್ಬಂದಿ ಏನೆಲ್ಲ ಸರ್ಕಸ್ ಮಾಡ್ತಾರೆ ನೋಡಿ ಎಂದಿದ್ದಾರೆ. ಈ ರೀತಿ ರಜೆ ಪತ್ರ ಬರೆದ ಪೊಲೀಸ್ ಪೇದೆ ಮೇಲೆ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗಿದೆ.
PublicNext
09/12/2020 08:54 am