ನವದೆಹಲಿ: ಪ್ರೀತಿ ಎಂಬುದು ಮಾಯೆ ಅಂತಾರೆ. ಅದು ಯಾವಾಗ? ಎಲ್ಲಿ? ಯಾರ ನಡುವೆ? ಹೇಗೆ ಹುಟ್ಟುತ್ತೆ ಅನ್ನೋದು ಅದರಲ್ಲಿ ಬೀಳುವವರಿಗೂ ಗೊತ್ತಾಗೋದಿಲ್ಲ. ಈಗಾಗಲೇ ಎರಡು ದೇಶಗಳ ಜೋಡಿಯ ನಡುವೆ ಪ್ರೇಮವಾಗಿ ಮದುವೆಯೂ ಆಗಿರುವ ಬಗ್ಗೆ ಬೇಕಾದಷ್ಟು ವರದಿಯಾಗಿವೆ. ಆದ್ರೆ ಅದೆಲ್ಲಕ್ಕಿಂತಲೂ ಇದು ತುಂಬಾನೇ ಡಿಪರೆಂಟು. ಯಾಕಂದ್ರೆ ಇದು ಎರಡು ದೇಶಗಳ ಜೋಡಿಯ ಸಲಿಂಗ ಪ್ರೇಮ. ಆ ದೇಶಗಳು ಯಾವುವೆಂದರೆ ಭಾರತ ಮತ್ತು ಪಾಕಿಸ್ತಾನ.
ಭಾರತದ ಹುಡುಗಿ ಅಂಜಲಿ ಚಕ್ರ. ಪಾಕಿಸ್ತಾನದ ಹುಡುಗಿ ಸೂಫಿ ಮಲ್ಲಿಕ್. ಇವರಿಬ್ಬರೂ ಮೊದಲು ಭೇಟಿಯಾಗಿದ್ದು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ. ಪರಿಚಯ ಆದಾಗ ಗೆಳತಿಯರಂತೆ ಇದ್ದ ಇವರಿಬ್ಬರೂ ಆಮೇಲಾಮೇಲೆ ಒಬ್ಬರನ್ನೊಬ್ಬರು ಬಯಸತೊಡಗಿದರಂತೆ. ಅದು ಈಗ ಪ್ರೇಮವಾಗಿ ಇಬ್ಬರೂ ಜೊತೆಯಲ್ಲಿರುವ ತೀರ್ಮಾನದವರೆಗೆ ಬಂದು ನಿಂತಿದೆ. ಇಬ್ಬರೂ ಈಗ ಡೇಟಿಂಗ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಅಂಜಲಿಗೆ ಈ ಮುಂಚೆ ಗೆಳೆಯನಿದ್ದು ಆಕೆ ಆತನ ಬಗ್ಗೆ ಅಷ್ಟೊಂದು ಆಕರ್ಷಿತಳಾಗಿರಲಿಲ್ಲ. ಹೀಗಾಗಿ ಸೂಫಿ ಮಲ್ಲಿಕ್ ಜೊತೆ ಇರಲು ಅಂಜಲಿ ನಿರ್ಧರಿಸಿದ್ದಾಳೆ.
PublicNext
26/07/2022 11:11 am