ಮಕ್ಕಳ ಮೇಲೆ ಎಷ್ಟೇ ನಿಗಾ ಇಟ್ಟಿದ್ದರು ಅವರು ಮಾಡುವ ಕೆಲವು ತುಂಟಾಟಗಳು ಮಕ್ಕಳ ಜೀವಕ್ಕೆ ಕುತ್ತಾಗುತ್ತದೆ ಎನ್ನುವುದಕ್ಕೆ ಈ ವಿಡಿಯೋವೊಂದು ಸಾಕ್ಷಿಯಾಗಿದೆ.
ಹೌದು ಶಾಲೆಯೊಂದರಲ್ಲಿ ಮಗುವೊಂದು ಆಕಸ್ಮಿಕವಾಗಿ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳವನ್ನು ನುಂಗಿ ಜೀವಕ್ಕೆ ಕುತ್ತು ತಂದುಕೊಂಡ ಸಂದರ್ಭದಲ್ಲಿ ಶಿಕ್ಷಕಿಯ ಸಮಯ ಪ್ರಜ್ಞೆಯಿಂದ ಮಗು ಬದುಕುಳಿದಿದೆ.
ಹೌದು ರಾಬರ್ಟ್ ಎಂಬ ವಿದ್ಯಾರ್ಥಿ, ನ್ಯೂಜೆರ್ಸಿಯ ಈಸ್ಟ್ ಆರೆಂಜ್ ಕಮ್ಯುನಿಟಿ ಚಾರ್ಟರ್ ಸ್ಕೂಲ್ ನಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ.
ತರಗತಿಯಲ್ಲಿ ಆತ ನೀರು ಕುಡಿಯಲು ಮುಂದಾಗಿ ಬಾಟಲಿಯ ಮುಚ್ಚಳವನ್ನು ತನ್ನ ಬಾಯಿಯಿಂದ ತರೆಯುವಾಗ ಆಕಸ್ಮಿಕವಾಗಿ ಕ್ಯಾಪ್ ಗಂಟಲಿನಲ್ಲಿ ಸಿಲುಕಿಕೊಂಡಿದೆ.
ಕೂಡಲೇ ಬಾಲಕ ಸಹಾಯಕ್ಕೆ ಬಂದ ಶಿಕ್ಷಕಿ ಜಾನೀಸ್ ಜೆಂಕಿನ್ಸ್ ಮುಚ್ಚಳವನ್ನು ಹೊರಹಾಕಲು ಹೈಮ್ಲಿಚ್ ತಂತ್ರವನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಬಾಲಕನ ಜೀವವನ್ನು ಕಾಪಾಡಿದ್ದಾರೆ.
ಈ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೈಮ್ಲಿಚ್ ಕುಶಲ ವಿಧಾನ ಎಂದರೇನು.. ?
ಹೈಮ್ಲಿಚ್ ಕುಶಲ ಅಂದ್ರೆ ಕಿಬ್ಬೊಟ್ಟೆಯ ಒತ್ತಡ ಎಂದೂ ಕರೆಯುತ್ತಾರೆ. ಇದು ಗಂಟಲಿನಲ್ಲಿ ಸಿಲುಕಿರುವ ವಸ್ತುವನ್ನು ತೆಗೆದುಹಾಕಲು ಸರಳವಾದ ಪ್ರಥಮ ಚಿಕಿತ್ಸಾ ವಿಧಾನವಾಗಿದೆ.
ಎರಡೂ ಕೈಗಳಿಂದ ಅವರನ್ನು ಹಿಡಿದು ಪದೇಪದೇ ಮೇಲಕ್ಕೆತ್ತುತ್ತಾ ಮಾಡುವ ವಿಧಾನ ಇದಾಗಿದೆ. ಇದು ಶ್ವಾಸಕೋಶವನ್ನು ಸಂಕುಚಿತಗೊಳಿಸುತ್ತದೆ. ಶ್ವಾಸನಾಳದಲ್ಲಿ ಇರುವ ಯಾವುದೇ ವಸ್ತುವಿನ ಮೇಲೆ ಒತ್ತಡವನ್ನು ಬೀರಿ, ಅದನ್ನು ಹೊರಹಾಕುತ್ತದೆ.
PublicNext
15/04/2022 01:02 pm