ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ ಮಹಿಳೆಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಮುಸ್ಲಿಂ ಯೋಧ

ತಿರುಪತಿ : ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ ಇಲ್ಲಿ ಎಲ್ಲಾ ಧರ್ಮದ ಜನತೆ ವಾಸಿಸುತ್ತಿದ್ದಾರೆ.

ಆಯಾ ಧರ್ಮಕ್ಕೆ ಸಂಬಂಧಿಸಿದ ಪೂಜೆ ಪುನಸ್ಕಾರಗಳನ್ನು ಮಾಡುವುದು ಸಾಮಾನ್ಯ.

ಸದ್ಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದ ಮಹಿಳೆಯೊಬ್ಬಳನ್ನು ಮುಸ್ಲಿಂ ಯೋಧ ಹೆಗಲ ಮೇಲೆ ಹೊತ್ತೊಯ್ದಿರುವ ಘಟನೆ ವರದಿಯಾಗಿದೆ.

ಸೇವಾ ಭಾವವನ್ನು ತೋರಿದ ಯೋಧನ ಬಗ್ಗೆ ನೆಟ್ಟಿಗರು ಶಹಬ್ಬಾಸ್ ಎನ್ನುತ್ತಿದ್ದಾರೆ.

58 ವರ್ಷದ ಮಹಿಳೆ ಮಂಗಿ ನಾಗೇಶ್ವರಮ್ಮ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದರು.

ದೇವಸ್ಥಾನಕ್ಕೆ ಆರು ಕಿ.ಮೀ ದೂರವಿದ್ದಾಗ ನಾಗೇಶ್ವರಮ್ಮ ಅವರಿಗೆ ಬಿಪಿ ಕಡಿಮೆಯಾಗಿದ್ದು, ಆಕೆ ನಡೆಯಲಾಗದ ಸ್ಥಿತಿ ತಲುಪಿದ್ದಾರೆ.

ಆ ವೇಳೆ ಆ ಸ್ಥಳದಲ್ಲಿ ಮುಸ್ಲಿಂ ಯೋಧ ಶೇಖ್ ಅರ್ಷದ್ ನನ್ನು ಯಾತ್ರಿಕರ ಮೇಲ್ವಿಚಾರಣೆಗೆ ನೇಮಿಸಲಾಗಿತ್ತು.

ನಾಗೇಶ್ವರಮ್ಮನ ಕಷ್ಟವನ್ನು ನೋಡಲಾಗದ ಶೇಖ್ ಅರ್ಷದ್, ಆಕೆಯನ್ನು ಮೊದಲು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಪ್ರಥಮ ಚಿಕಿತ್ಸೆ ನೀಡಿಸಿ, ನಂತರ ಆಕೆಯನ್ನು ಹೆಗಲ ಬೆನ್ನಿನ ಮೇಲೆ ಕೂರಿಸಿಕೊಂಡು ಹೊತ್ತು ದೇವಸ್ಥಾನಕ್ಕೆ ತಲುಪಿಸಿ, ಕೆಲಸಕ್ಕೆ ಮರಳಿದ್ದಾನೆ.

ಶೇಖ್ ಅರ್ಷದ್ ನ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

Edited By : Nirmala Aralikatti
PublicNext

PublicNext

24/12/2020 08:26 pm

Cinque Terre

150.53 K

Cinque Terre

56

ಸಂಬಂಧಿತ ಸುದ್ದಿ