ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಣ್ಣೀರುಬಾವಿ: ಕಡಲಿನಲ್ಲಿ ಕಾಲಿಗೆ ಸರಪಳಿ ಬಿಗಿದು ಸಾಹಸ ಮೆರೆದ ಶಿಕ್ಷಕ ನಾಗರಾಜ ಖಾರ್ವಿ

ಮಂಗಳೂರು: ಈಜು ಹಾಗೂ ಯೋಗಾಸನದ ಬಗ್ಗೆ ಜನ ಜಾಗೃತಿ ಮೂಡಿಸಲು ಶಿಕ್ಷಕ ನಾಗರಾಜ ಖಾರ್ವಿ ಕಂಚುಗೋಡು ಅವರು ಪದ್ಮಾಸನ ಭಂಗಿಯಲ್ಲಿ ತನ್ನೆರಡು ಕಾಲಿಗೂ ಸರಪಳಿ ಬಿಗಿದು ಬೀಗ ಹಾಕಿ,

ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಕಡಲಿನಲ್ಲಿ ಈಜುತ್ತಾ 1 ಕಿ.ಮೀ. ದೂರವನ್ನು ಯಶಸ್ವಿಯಾಗಿ ಕ್ರಮಿಸಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ನಲ್ಲಿ ಹೊಸ ದಾಖಲೆ ಬರೆಯಲು ಪ್ರಯತ್ನ ನಡೆಸಿದ್ದಾರೆ.

ಬಂಟ್ವಾಳ ತಾಲೂಕಿನ ಕಲ್ಮಂಜದ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರಾಗಿರುವ ನಾಗರಾಜ್, ಮಂಗಳೂರು ತಣ್ಣೀರುಬಾವಿಯ ಕಡಲ ತೀರದಿಂದ ಶುಕ್ರವಾರ ಬೆಳಗ್ಗೆ 8.55 ಕ್ಕೆ ಈಜು ಆರಂಭಿಸಿ, 9.20 ಕ್ಕೆ ಗುರಿ ಮುಟ್ಟಿದರು.

ಅವರು ಕೇವಲ 25 ನಿಮಿಷ, 16 ಸೆಕೆಂಡ್ ನಲ್ಲಿ ಈ ನಿಗದಿತ ದೂರವನ್ನು ಸುಲಭವಾಗಿಯೇ ಪೂರೈಸಿದರು.

ಈ ವಿಶೇಷ ಸಾಧನೆಯ ವೀಡಿಯೊ ಹಾಗೂ ದಾಖಲೆ ಪತ್ರವನ್ನು 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಗೆ ಸಲ್ಲಿಸಬೇಕಿದ್ದು, ಆ ಸಂಸ್ಥೆಯವರು ಕೂಲಂಕಷವಾಗಿ ಪರಿಶೀಲಿಸಿ, ಬಳಿಕ ಹೊಸ ದಾಖಲೆ ನಿರ್ಮಾಣವಾದ ಕುರಿತು ಪ್ರಮಾಣಪತ್ರ ನೀಡುತ್ತಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕಂಚುಗೋಡಿನವರಾದ ನಾಗರಾಜ ಖಾರ್ವಿ, ಈ ಮೊದಲು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಈಜು ಸ್ಪರ್ಧೆ ಗಳಲ್ಲಿ ಭಾಗವಹಿಸಿ ಚಿನ್ನ ಸಹಿತ ಹಲವಾರು ಪದಕಗಳನ್ನು ಗೆದ್ದಿದ್ದಾರೆ.

Edited By : Manjunath H D
PublicNext

PublicNext

21/12/2020 02:09 pm

Cinque Terre

91.52 K

Cinque Terre

1