ಬರೇಲಿ: ಮದುವೆಯಾಗಿ 15 ವರ್ಷವಾಗಿತ್ತು. ಆದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಆ ಕೃಷಿಕ ದಂಪತಿ ಮಗುವನ್ನು ದತ್ತು ಸ್ವೀಕರಿಸಲು ನಿರ್ಧರಿಸಿದ್ದರು. ಆದ್ರೆ ಈಗ ಉತ್ತರ ಪ್ರದೇಶದ ಹಳ್ಳಿಯ ಈ ಸಾಮಾನ್ಯ ರೈತ ದಂಪತಿ ತಾವೇ ಸಾಕಿದ್ದ ಕರುವನ್ನು ಪುತ್ರನೆಂದು ದತ್ತು ಸ್ವೀಕರಿಸಿ ಅದಕ್ಕೆ ಲಾಲ್ಟು ಬಾಬ ಎಂದು ಹೆಸರಿಟ್ಟಿದ್ದಾರೆ.
ವಿಜಯ್‌ಪಾಲ್ ಹಾಗೂ ರಾಜೇಶ್ವರಿ ದೇವಿ ಲಾಲ್ಟು ಬಾಬುವಿನ ಕೇಶ ಮುಂಡನಕ್ಕೆ ಸುಮಾರು 500 ಜನರನ್ನು ಆಹ್ವಾನಿಸಿದ್ದಾರೆ.ಲಾಲ್ಟು ಬಾಬಾವನ್ನು ಲಾಲ್ಟು ಘಾಟ್‌ಗೆ ಕರೆದೊಯ್ದು ಗೋಮತಿ ನದಿ ತೀರದಲ್ಲಿ ಕೇಶಮುಂಡನ ಸಂಪ್ರದಾಯ ನೆರವೇರಿಸಿದ್ದಾರೆ. ಪುರೋಹಿತರು ಹಸು ಹಾಗೂ ಅದರ ಪೋಷಕರನ್ನು ಹರಸಿದ್ದಾರೆ.
ನಂತರ ಸಂಭ್ರಮ ಆಚರಣೆ ನಡೆದು ಗ್ರಾಮಸ್ಥರು ಭಿನ್ನವಾದ ಉಡುಗೊರೆಗಳೊಂದಿಗೆ ಬಂದಿದ್ದರು. ಲಾಲ್ಟುನನ್ನು ಮಗನಂತೆಯೇ ಸಾಕಿದ್ದೇನೆ. ಅದು ಹುಟ್ಟಿದಾಗಿನಿಂದಲೂ ನಮ್ಮ ಜೊತೆಗೇ ಇದೆ. ನಮ್ಮನ್ನು ಹಚ್ಚಿಕೊಂಡಿದೆ ಎಂದಿದ್ದಾರೆ ವಿಜಯ್ ಪಾಲ್.
PublicNext
17/12/2020 07:22 pm