ಬೆಂಗಳೂರು: ನಾನು ಈ ರಾಜ್ಯದ ಮುಖ್ಯಮಂತ್ರಿ. ನಾನೇಕೆ ಟಿಕೆಟ್ ತಗೋಬೇಕು? ಈ ಬಸ್ ನನ್ನ ಅಥಾರಿಟಿಯಲ್ಲಿದೆ. ಉಚಿತವಾಗಿ ಪ್ರಯಾಣ ಮಾಡಲು ನನಗೆ ಹಕ್ಕಿದೆ. ನನ್ನ ಸ್ಟಾಪ್ ಬರೋವರೆಗೂ ನಾನು ಇಳಿಯಲ್ಲ.
ಬಿಎಂಟಿಸಿ ಬಸ್ ಹತ್ತಿದ ಮಹಿಳೆಯೊಬ್ಬಳು ಕಂಡಕ್ಟರ್ ಗೆ ಈ ರೀತಿ ಅವಾಜ್ ಹಾಕಿದ್ದಾಳೆ. ಪಾಪ ಕಂಡಕ್ಟರ್, ಈಕೆಯನ್ನು ಕೆಳಗಿಳಿಸಲಾಗದೇ, ಬಸ್ಸಿನಲ್ಲಿ ಕರೆದೊಯ್ಯಲೂ ಆಗದೇ ತೊಳಲಾಡಿದ್ದಾನೆ.
ಸುಮಾರು ದಿನಗಳಿಂದ ಬೆಂಗಳೂರಿನ ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ ತೆರಳುವ ಬಸ್ ಹತ್ತುವ ಈಕೆ ಇತ್ತೀಚಿನ ದಿನಗಳಲ್ಲಿ ಹೀಗೆ ವರ್ತಿಸುತ್ತಿದ್ದಾಳೆ ಎಂದು ಸಾರಿಗೆ ಸಿಬ್ಬಂದಿಗಳು ತಿಳಿಸಿದ್ದಾರೆ.
ನಾನು ಟಿಕೆಟ್ ತಗೊಳೋದಿಲ್ಲ. ಬೇಕಿದ್ರೆ ಬಸ್ಸಿನಲ್ಲಿರುವ ಎಲ್ಲರಿಗೂ ಟಿಕೆಟ್ ಕೊಡಿ. ನಾನೇ ಸಿಎಂ. ನಾನ್ಯಾಕೆ ಟಿಕೆಟ್ ತಗೋಬೇಕು? ಎಂದ ಈಕೆ ನಿರ್ವಾಹಕರಿಗೆ ಅವಾಜ್ ಹಾಕಿದ್ದಾಳೆ.
PublicNext
16/12/2020 12:58 pm