ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾರಿಬಂದು ಹಾರ ಹಾಕಿದ ವರ ಬೆಂಗಳೂರಿನಲ್ಲೊಂದು ವಿನೂತನ ಮದುವೆ

ಬೆಂಗಳೂರು: ಕೊರೊನಾದಿಂದಾ ಕಂಗಾಲಾಗಿರುವ ಜನ ಖುಷಿಗಾಗಿ ಏನಾದರೂ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.

ಸದ್ಯ ಇಲ್ಲೊಬ್ಬ ವರ ಹಾರಿ ಬಂದು ಹಾರ ಹಾಕಿದ್ದಾನೆ. ಹೌದು ಹೆಲಿಕಾಪ್ಟರ್ ನಲ್ಲಿ ಕಲ್ಯಾಣ ಮಂಟಪಕ್ಕೆ ಬಂದ ವರ ತನ್ನ ಭವಿಷ್ಯದ ಮಡದಿಗೆ ಹಾರ ಹಾಕಿದ್ದಾನೆ.

ಕೊರೊನಾದಿಂದಾಗಿ ಸಂತೋಷವೇ ಮರೆಯಾಗುತ್ತಿದೆ ಕಾರಣ ಹೆಚ್ಚೆಚ್ಚು ಜನ ಸೇರಿದ್ರೆ ಕಾರ್ಯಕ್ರಮಕ್ಕೆ ಮೆರಗು ಆದ್ರೆ ಏನ್ ಮಾಡೋದು ಮದುವೆ ಸಮಾರಂಭಗಳಿಗೆ ಇಷ್ಟೇ ಜನ ಸೇರಬೇಕು ಎನ್ನುವ ನಿಯಮ ಹಾಗಾಗಿ ಸರಳ ಮದುವೆಗಳೇ ಉತ್ತಮ ಎಂದು ಹಲವರು ಸಿಂಪಲ್ ಆಗಿ ಮದುವೆ ಆಗಿದ್ದಾರೆ.

ಆದರೆ, ಈಗ ಬೆಂಗಳೂರಿನಲ್ಲಿ ಬಲು ಅಪರೂಪಕ್ಕೊಂದು ಅದ್ಧೂರಿ ಮದುವೆ ನಡೆದಿದೆ.

ತುಮಕೂರಿನ ಹುಡುಗ ನಿರೂಪ್ ಹಾಗೂ ಬೆಂಗಳೂರಿನ ಹುಡುಗಿ ಐಶ್ವರ್ಯಾ ಈ ವಿಶೇಷ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ.

ತಲಘಟ್ಟಪುರದ ಬಿಆರ್ ಎಸ್ ಗ್ರಾಂಡ್ಯುರ್ ನಲ್ಲಿ ನಡೆದ ಈ ಮದುವೆಯ ವೈಭವವನ್ನು ನೋಡಿದರೆ ಹುಬ್ಬೇರಿಸಲೇಬೇಕು.

ತುಮಕೂರಿನಿಂದ ಹೆಲಿಕಾಪ್ಟರ್ ನಲ್ಲಿ ಬಂದ ಬಲರಾಮ್ ಶೆಟ್ಟಿ ಹಾಗೂ ರಮಾದೇವಿ ದಂಪತಿ ಪುತ್ರ ನಿರೂಪ್ ವೃತ್ತಿಯಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿದ್ದು, ರೈಸ್ ಮಿಲ್ ಸಹ ಹೊಂದಿದ್ದಾರೆ.

ಬೆಂಗಳೂರಿನ ಕಿಶೋರ್ ಮತ್ತು ಮಾಧವಿ ಅವರ ಪುತ್ರಿ ಐಶ್ವರ್ಯಾರನ್ನು ವರಿಸಿದ್ದಾರೆ.

ಚಾಪರ್ ಮೂಲಕ ನಿರೂಪ್ ಕಲ್ಯಾಣ ಮಂಟಪಕ್ಕೆ ಬಂದಿರುವುದು ಈಗ ಸೋಷೊಯಲ್ ಮೀಡಿಯಾದಲ್ಲಿ ಫುಲ್ ಸದ್ದು ಮಾಡುತ್ತಿದೆ.

Edited By : Nirmala Aralikatti
PublicNext

PublicNext

01/12/2020 07:12 pm

Cinque Terre

55.49 K

Cinque Terre

0

ಸಂಬಂಧಿತ ಸುದ್ದಿ