ಕಾರವಾರ: ಕೆಲ ದುಷ್ಕರ್ಮಿಗಳು ಬದುಕಲು ಹೋರಾಟ ನಡೆಸಿದ್ದ ಮೀನಿನ ಬಾಯಿಗೆ ಬೀಡಿ ಇರಿಸಿ ವಿಕೃತಿ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಕಿಡಿಕಾರಿದ್ದಾರೆ.
ಈ ಘಟನೆಯು ಕಾರವಾರದ ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಮೀನಿಗೆ ಬೀಡಿ ಇಟ್ಟ ಮೀನುಗಾರರು ಹಿಂದಿಯಲ್ಲಿ ಮಾತನಾಡುವುದನ್ನ ನೀವು ವಿಡಿಯೋದಲ್ಲಿ ಕೇಳಬಹುದಾಗಿದೆ.
ಮೀನುಗಾರರು ಚೊಂಚಿ ಹೆಸರಿನ ಮೀನನ್ನು ಹಿಡಿದ್ದರು. ಬಳಿಕ ಮೀನು ತನ್ನ ಜೀವ ಉಳಿಸಿಕೊಳ್ಳುವದಕ್ಕಾಗಿ ಬಾಯಿ ತೆಗೆದು ಉಸಿರಾಡುತ್ತಿದ್ದಾಗ ಓರ್ವ ಕಾರ್ಮಿಕ ಬೀಡಿ ಹಚ್ಚಿ ಮೀನಿನ ಬಾಯಿಗೆ ಇಟ್ಟಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕಾರ್ಮಿಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
29/11/2020 04:10 pm